ಬುಧವಾರ, ಜೂನ್ 16, 2021
28 °C

ಮಕ್ಕಳನ್ನು ಶಾಲೆಗೆ ಕಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ಅನಾದಿಕಾಲದಿಂದಲೂ ಇದ್ದ ಪೌರಾಣಿಕ ಕಥೆಗಳನ್ನು ಜೀವಂತವಾಗಿ ಇರುವಂತೆ ತೋರಿಸುವ ಕಲೆ ತಲೆ ತಲಾಂತರದಿಂದ ಬುಹುರೂಪಿ, ಬೇಡಜಂಗಮರಿಗೆ ಕರಗತವಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ನರಸಿಂಹನಾಯಕ ನುಡಿದರು.ಹುಣಸಗಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಲೆಮಾರಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಮಟ್ಟದ ಕಲೆ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಕ್ಕೆ ತಕ್ಕಂತೆ ನೀವೂ ಬದಲಾಗಿ ನಿಮ್ಮ ನಿತ್ಯ ಕಲೆಯನ್ನು ಜೀವಂತವಾಗಿಸುವುದಕ್ಕಿಂತ ಪೂರ್ವ ನಿಮ್ಮ ಬದುಕನ್ನು ಹಸನಾಗಿಸಿಕೊಳ್ಳಿ ನಂತರ ಕಲೆಯನ್ನು ಪೋಷಿಸಿ ಎಂದು ಸಲಹೆ ನೀಡಿದರು. ಇಂದು ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಯಾವುದೇ ಕಾರಣಕ್ಕೂ ಬಿಕ್ಷಾಟಣೆಗೆ ತಳ್ಳಬೇಡಿ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಮುಂದಿನ ದಿನಮಾನದಲ್ಲಿ ನೀವು ಒಂದೇ ಗ್ರಾಮದಲ್ಲಿ ವಾಸ ಮಾಡಿದರೇ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.ಪ್ರಾಸ್ತಾವಿಕವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರತಾಪ ಬಹುರೂಪಿ ಮತ್ತು ವಿ. ಶ್ರೀನಿವಾಸ ಮಾತನಾಡಿದರು. ಅಧ್ಯಕ್ಷತೆಯನ್ನು ಕೃಷಿಕ ಸಮಾಜದ ಅಧ್ಯಕ್ಷ ನಾಗಣ್ಣಸಾಹು ದಂಡಿನ್ ವಹಿಸಿದ್ದರು.

ವೇದಿಕೆ ಮೇಲೆ ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್.ಸಿ.ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಯಲ್ಲಪ್ಪ ಕುರಕುಂದಿ, ಚಂದ್ರಶೇಖರ ದಂಡಿನ್,ವಿರೇಶ ಚಿಂಚೋಳಿ, ಅಧ್ಯಕ್ಷೆ ಹನುಮವ್ವ ಬಾಲಗೌಡ್ರ, ಸಿರವಾಟಿ ನರಸಿಂಹಲು, ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.

ರಾಜಬಾಬು ದೊಡ್ಡಮನಿ ಸ್ವಾಗತಿಸಿದರು. ಭೀಮರಾಯ ವಂದಿಸಿದರು. ಗುರುರಾಠೋಡ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮಕ್ಕೂ ಮುನ್ನು ಎಪಿಎಂಸಿ ಗೇಟ್‌ನಿಂದ ಗ್ರಾಮ ಪಂಚಾಯಿತಿವರೆಗೆ ವಿವಿಧ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು. ನೂರಾರು ಕಲಾವಿದರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.