ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯರ ವರ್ಗಾವಣೆಯಿಂದ ಬೇಸರಗೊಂಡ ಮಕ್ಕಳು ಕೈಗಾಯ ಮಾಡಿಕೊಂಡ ಸುದ್ದಿ ಕಳವಳಕಾರಿ. ಆರ್ಥಿಕ ಪರಿಸ್ಥಿತಿ ಮತ್ತು ಊರಿನಿಂದ ದೂರ ಇರುವ ವಿಚಾರಗಳನ್ನು ಮನಗಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಪಾಠ ಮಾಡುವ ಉಪಾಧ್ಯಾಯರು ಒಂದೇ ಊರಿನಲ್ಲಿ ನೆಲೆ ಊರುವ ಅಥವಾ ಅಕ್ಕ ಪಕ್ಕದ ಹಳ್ಳಿಗಳಿಗೆ ವರ್ಗಾವಣೆ ಮಾಡಿಸಿಕೊಂಡು ಊರಿನ ಸಮೀಪ ಇರುವುದನ್ನು ನಾವು ಬಹಳಷ್ಟು ಸಂದರ್ಭಗಳಲ್ಲಿ ಕಾಣುತ್ತೇವೆ.

ಹೀಗೆ ಹತ್ತಾರು ವರ್ಷ ಒಂದೇ ಕಡೆ ಮತ್ತು ಅದೇ ಊರಿನಲ್ಲಿ ಮಕ್ಕಳಿಗೆ ಮನೆ ಪಾಠ ಮಾಡುತ್ತಾ ಇರುವುದರಿಂದಲೂ ಮಕ್ಕಳು ಮತ್ತು ಊರಿನವರಿಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಆಗ ಕಾನೂನಾತ್ಮಕ ವರ್ಗಾವಣೆ ಪ್ರಕ್ರಿಯೆ ತಪ್ಪು ಎಂಬ ಭಾವನೆ ಬಂದಾಗ ಮಕ್ಕಳು ಭಾವಾವೇಶಕ್ಕೆ ಒಳಗಾಗುತ್ತಾರೆ.

ಈ ಬಗ್ಗೆ ಸಾಮಾನ್ಯ ತಿಳುವಳಿಕೆ ಇದ್ದಾಗ ಇಂಥ ಅಪಾಯಕಾರಿ ಪ್ರಕರಣಗಳು ನಡೆಯಲಾರವು. ಉತ್ತಮ ಉಪಾಧ್ಯಾಯರು ಬೇರೊಂದು ಊರಿಗೆ ಹೋದರೆ ಅಲ್ಲಿಯ ಮಕ್ಕಳ ಶೈಕ್ಷಣಿಕ ಮಟ್ಟವೂ ಹೆಚ್ಚಾಗಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.