ಸೋಮವಾರ, ಮೇ 25, 2020
27 °C

ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ:  ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿನ ಪ್ರತಿಭೆ ಇನ್ನಷ್ಟು ಹೊರ ಹೊಮ್ಮಲು ಸಾಧ್ಯ ಎಂದು ಡಣಾಪುರ ಶಾಲೆಯ ಮುಖ್ಯಶಿಕ್ಷಕ ಬಿ.ಎಂ.ಎಸ್,ಮೃತ್ಯುಂಜಯ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಸಮೀಪದ ಹಂಪಿನಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹನುಮನಹಳ್ಳಿ ಕ್ಲಸ್ಟರ್ ಮಟ್ಟದ ಆರ್‌ಈಎಂಎಸ್ ಯೋಜನೆಯಡಿಯಲ್ಲಿ ನಿರಂತರ ಸಹ ಪಠ್ಯ ಚಟುವಟಿಕೆ ಕಲಿಕೋಪಕರಣಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳ ಮನೋಬಲ ಮತ್ತು ಬೌದ್ಧಿಕ ಪ್ರಗತಿಗೆ ಈ ಸಹ ಚಟುವಟಿಕೆಗಳ ಕಾರ್ಯಕ್ರಮ ಅನೂಕೂಲವಾಗುತ್ತದೆ. ಅಲ್ಲದೆ ಸ್ವಅಭಿವೃದ್ಧಿ ಹೊಂದಿ ಶೈಕ್ಷಣಿಕವಾಗಿ ಮುಂದೆ ಸಾಗಲು ಪ್ರೇರಕವಾಗಿದೆ. ಅಲ್ಲದೆ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಹೊಂದಲು ಪಾಲಕರೊಂದಿಗೆ ಶಿಕ್ಷಕರು ಹೆಚ್ಚಿನ  ಶ್ರಮವಹಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಯೋಜಕಿ ಮೇಘಾ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಈ ಕಲಿಕೋಪಕರಣಗಳ ಮೂಲಕ ವ್ಯಕ್ತಪಡಿಸಿ ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ಸೂಕ್ತವಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉನ್ನತ ಮಟ್ಟದಲ್ಲಿ ಸಾಗಬೇಕು ಎಂದರು.ನೌಕರರ ಸಂಘದ ಉಪಾಧ್ಯಕ್ಷ ಕುಬೇರಾಚಾರಿ, ಸಿಆರ್‌ಸಿ ತಿಂದಪ್ಪ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಆದೆಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ರತ್ನಮ್ಮ, ಹನುಮಂತಪ್ಪ, ಹನುಮಕ್ಕ, ದೊಡ್ಡ ಗಂಗಪ್ಪ, ಬಸಮ್ಮ, ಎಸ್‌ಡಿಎಂಸಿ ಉಪಾಧ್ಯಕ್ಷ ಕೆಂಚಪ್ಪ, ಸದಸ್ಯರಾದ ಹಸೇನ್‌ಸಾಬ್, ಕೆ.ಸೋಮಪ್ಪ, ಎಚ್. ಪಂಪಾಪತಿ, ಕೆ.ಪರಶುರಾಮ, ಎಚ್. ರಾಮಣ್ಣ, ಕೆ.ನಾಗಮ್ಮ, ನೀಲಮ್ಮ, ಶ್ರೀರಾಮಪ್ಪ,  ಎಚ್.ಎಂ. ಕರಿಬಸವಸ್ವಾಮಿ, ಬಿ. ನಾಗಣ್ಣಾಚಾರಿ, ಬಿ. ಶಂಕ್ರಪ್ಪ, ಬಿ.ಶಿವಯೋಗಿ ಉಪಸ್ಥಿತರಿದ್ದರು. ಎಚ್.ಎಂ. ಗುರುಸೋಮಯ್ಯ ಸ್ವಾಗತಿಸಿದರು. ಬಿ. ನಾಗಣ್ಣಾಚಾರಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.