ಶುಕ್ರವಾರ, ಜೂನ್ 18, 2021
20 °C

ಮಗುವನ್ನು ಎಸೆದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ಮಗುವಿನ ಅಳುವಿನಿಂದ ನಿದ್ರೆ ಹಾಳಾಗಿದ್ದಕ್ಕೆ ಕೋಪಗೊಂಡ ರೂಪದರ್ಶಿಯೊಬ್ಬರು ತಮ್ಮ ನಾಲ್ಕು ತಿಂಗಳ ಗಂಡು ಮಗುವನ್ನು ಹದಿನಾಲ್ಕನೇ ಅಂತಸ್ತಿನ ಕಟ್ಟಡದಿಂದ ಹೊರಗೆ ಎಸೆದ ಆಘಾತಕಾರಿ ಘಟನೆ ರಷ್ಯಾದ ನಿಝನಿ ನೊವಗೋರೋಡ್ ನಗರದಲ್ಲಿ ನಡೆದಿದೆ.

 

27 ವರ್ಷದ ಯಕಾಟೆರಿನಾ ಮಾರ್ಕೊಕಿನಾ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ. ಮಗುವಿನ ಮೃತದೇಹ ಬಿದ್ದಿರುವುದನ್ನು ಶುಕ್ರವಾರ ಬೆಳಿಗ್ಗೆ ಮಕ್ಕಳು ನೋಡಿ ಇತರರಿಗೆ ವಿಷಯ ತಿಳಿಸಿದ್ದಾರೆ.  ತನಿಖೆಗಾಗಿ ಯಕಾಟೆರಿನಾರನ್ನು ಮಾನಸಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.