ಸೋಮವಾರ, ಜೂನ್ 21, 2021
29 °C

ಮಠ, ಸಂಘ–ಸಂಸ್ಥೆಗಳಿಗೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯದ ವಿವಿಧ ಮಠಗಳಿಗೆ ರಾಜ್ಯ ಸರ್ಕಾರ ₨ 66 ಕೋಟಿ ಅನುದಾನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಮೈಸೂರು ಜಿಲ್ಲೆಯ ಫಲಾನುಭವಿ ಮಠ, ಸಂಘಸಂಸ್ಥೆಗಳ ವಿವರ ಇಲ್ಲಿದೆ.*ಮೈಸೂರಿನ ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ವಿಭಾಗೀಯ ಶಾಖಾ ಮಠಕ್ಕೆ ಬಾಲಕೀಯರ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ರೂ ₨ 2 ಕೋಟಿ.*ಕನಕ ಸಮುದಾಯ ಭವನದ ನಿರ್ಮಾಣಕ್ಕಾಗಿ ಹುಣಸೂರು ತಾಲ್ಲೂಕಿನ ಕುರುಬ ಸಮಾಜಕ್ಕೆ ₨ 50 ಲಕ್ಷ.*ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರದ ಟೌನ್‌ ಕುರುಬರ ಸಂಘಕ್ಕೆ ₨ 25 ಲಕ್ಷ.*ಕನಕ ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಕುರುಬರ ಸಂಘಕ್ಕೆ ರೂ 25 ಲಕ್ಷ.*ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ಈಡಿಗ ಸಮಾಜಕ್ಕೆ ₨ 10 ಲಕ್ಷ.*ಸಮುದಾಯ ಭವನ ನಿರ್ಮಾಣಕ್ಕೆ ತಿ.ನರಸೀಪುರ ತಾಲ್ಲೂಕು ಹೊಸಕೆಂಪಯ್ಯನಹುಂಡಿಯ ಉಪ್ಪಾರ ಸಮಾಜಕ್ಕೆ ₨ 10 ಲಕ್ಷ.*ಸಮುದಾಯ ಭವನ ನಿರ್ಮಾಣಕ್ಕೆ ಹುಣಸೂರು ತಾಲ್ಲೂಕಿನ ನಾಮಧಾರಿ ಸಮಾಜಕ್ಕೆ ₨ 10 ಲಕ್ಷ.*ಹುಣಸೂರು ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ₨ 10 ಲಕ್ಷ.*ನಂಜನಗೂಡು ತಾಲ್ಲೂಕು ಹಾರುಪುರ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.*ನಂಜನಗೂಡು ತಾಲ್ಲೂಕು ಹೊಸಕೋಟೆಯ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.*ತಿ.ನರಸೀಪುರ ತಾಲ್ಲೂಕು ತುಂಬಲ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.*ನಂಜನಗೂಡು ತಾಲ್ಲೂಕು ತೊರಹಳ್ಳಿಮೊಲೆ ಗ್ರಾಮದ ಉಪ್ಪಾರ ಸಮುದಾಯ ಭವನಕ್ಕೆ ₨ 10 ಲಕ್ಷ.*ಎಚ್‌.ಡಿ.ಕೋಟೆಯ ಕಾಳಿದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ ₨ 50 ಲಕ್ಷ.*ನಂಜನಗೂಡು ಪಟ್ಟಣದ ಉಪ್ಪಾರ ಸಮುದಾಯ ಭವನದ ನಿರ್ಮಾಣಕ್ಕೆ ₨ 25 ಲಕ್ಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.