ಮಡಿಕೇರಿ: ಪ್ರಸ್ತುತ ನಗರಸಭೆಯ ಆಡಳಿತವು ಜೂನ್ 23ಕ್ಕೆ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸರ್ಕಾರ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಅನ್ವಯ ಗುರುವಾರ ಸಂಜೆ ನಗರಾಭಿವೃದ್ಧಿ ಇಲಾಖೆಯು ಮೀಸಲಾತಿಯನ್ನು ಪ್ರಕಟಿಸಿದೆ.

ಮೀಸಲಾತಿಗೆ ಸಂಬಂಧಿಸಿದಂತೆ ಕರಡು ಸೂಚನೆ ಇಂತಿದೆ; ವಾರ್ಡ್ 1 (ಬ್ಲಾಕ್ 14, ಡೈರಿ ಫಾರಂ, ರೈಫಲ್ ರೇಂಜ್, ಸುಬ್ರಮಣ್ಯ ನಗರ, ಡಿಎಆರ್ ಕ್ವಾಟರ್ಸ್, ಎಫ್ಎಂಸಿ ಕಾಲೇಜು ಹಿಂಭಾಗ ರಸ್ತೆ, ವಿದ್ಯಾನಗರ ಹೌಸಿಂಗ್ ಬೋರ್ಡ್)- ಸಾಮಾನ್ಯ ಮಹಿಳೆ, ವಾರ್ಡ್ 2 (ಬ್ಲಾಕ್ ನಂಬರ್ 1, ಮಹದೇವಪೇಟೆಯ ಮುಖ್ಯ ರಸ್ತೆ, ಮುತ್ತಪ್ಪ ದೇವಸ್ಥಾನ ರಸ್ತೆ, ಕೋದಂಡರಾಮ ದೇವಸ್ಥಾನ ರಸ್ತೆ)- ಹಿಂದುಳಿದ ವರ್ಗ `ಬಿ' ಮಹಿಳೆ, ವಾರ್ಡ್ 3 (ಬ್ಲಾಕ್ ನಂಬರ್ 24, ಬ್ಲಾಕ್ ನಂಬರ್ 02, 03, ಗಣಪತಿ ಬೀದಿ, ಮಹದೇವ ಪೇಟೆ, ಮುಖ್ಯರಸ್ತೆ, ದಾಸವಾಳ ರಸ್ತೆ)- ಸಾಮಾನ್ಯ ಮಹಿಳೆ, ವಾರ್ಡ್ 4 (ಬ್ಲಾಕ್ ನಂಬರ್ 3 ಭಾಗಶಃ, ಬ್ಲಾಕ್ ನಂಬರ್ 6, ದಾಸವಾಳ ಭಾಗಶಃ, ಗಣಪತಿ ಬೀದಿ ಭಾಗಶಃ)- ಸಾಮಾನ್ಯ ಮಹಿಳೆ, ವಾರ್ಡ್ 5 (ಬ್ಲಾಕ್ ನಂಬರ್ 4, 5, ಮಹದೇವಪೇಟೆ, ಮಕ್ಕಾನ್ ಗಲ್ಲಿ, ಕನಕದಾಸ ರಸ್ತೆ ಮತ್ತು ಹಿಲ್ ರಸ್ತೆ)- ಹಿಂದುಳಿದ ವರ್ಗ `ಬಿ', ವಾರ್ಡ್ 6 (ಬ್ಲಾಕ್ ನಂಬರ್ 7, ಬ್ಲಾಕ್ ನಂಬರ್ 4 ಭಾಗಶಃ, ರಾಣಿಪೇಟೆ, ಮಹದೇವಪೇಟೆ

ಭಾಗಶಃ, ಹಿಲ್ ರಸ್ತೆ ಭಾಗಶಃ) - ಹಿಂದುಳಿದ ವರ್ಗ `ಎ' ಮಹಿಳೆ, ವಾರ್ಡ್ 7 (ಬ್ಲಾಕ್ ನಂಬರ್ 10, ಬ್ಲಾಕ್ ನಂಬರ್ 7 ಭಾಗಶಃ, ಬ್ಲಾಕ್ ನಂಬರ್ 8, 9,14, ರಾಣಿಪೇಟೆ, ಕಾನ್ವೆಂಟ್ ರಸ್ತೆ, ಮಲ್ಲಿಕಾರ್ಜುನ ನಗರ)- ಪರಿಶಿಷ್ಟ ಜಾತಿ- ಮಹಿಳೆ, ವಾರ್ಡ್ 8 (ಬ್ಲಾಕ್ ನಂಬರ್ 8 ಭಾಗಶಃ, ಬ್ಲಾಕ್ ನಂಬರ್ 25, ರಾಣಿಪೇಟೆ, ಮಲ್ಲಿಕಾರ್ಜುನ ನಗರ) - ಸಾಮಾನ್ಯ, ವಾರ್ಡ್ 9 (ಬ್ಲಾಕ್ ನಂಬರ್ 9 ಭಾಗಶಃ, 14 ಭಾಗಶಃ, 8 ಭಾಗಶಃ, ಕಾಲೇಜು ರಸ್ತೆ, ಭಗವತಿ ನಗರ, ಐಟಿಐ ಹೌಸಿಂಗ್ ಬೋರ್ಡ್)- ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ 10 (ಬ್ಲಾಕ್ ನಂಬರ್ 12, 11, 13 ಕಾಲೇಜು ರಸ್ತೆ, ಅಪ್ಪಚ್ಚು ಕವಿ ರಸ್ತೆ, ಪೆನ್ಶನ್ ಲೇನ್, ಶಾಸ್ತ್ರಿ ನಗರ)- ಹಿಂದುಳಿದ ವರ್ಗ `ಎ', ವಾರ್ಡ್ 11 (ಬ್ಲಾಕ್ ನಂಬರ್ 12 ಭಾಗಶಃ, 11 ಭಾಗಶಃ, 13 ಭಾಗಶಃ, ಗೌಳಿಬೀದಿ ಮುಖ್ಯರಸ್ತೆ) - ಸಾಮಾನ್ಯ ಮಹಿಳೆ, ವಾರ್ಡ್ 12 (ಬ್ಲಾಕ್ ನಂಬರ್ 14 ಭಾಗಶಃ, ಇಂದಿರಾನಗರ ಚಾಮುಂಡೇಶ್ವರಿ ನಗರ ಹಾಗೂ ಹೊಸ ಬಡಾವಣೆ) - ಹಿಂದುಳಿದ ವರ್ಗ `ಎ' ಮಹಿಳೆ, ವಾರ್ಡ್ 13 (ಬ್ಲಾಕ್

ನಂಬರ್ 14 ಭಾಗಶಃ ಜ್ಯೋತಿ ನಗರ, ಹೊಸ ಬಡಾವಣೆ, ಪೊಲೀಸ್ ಕ್ವಾಟರ್ಸ್, ರಿಮ್ಯಾಂಡ್ ಹೋಮ)- ಸಾಮಾನ್ಯ, ವಾರ್ಡ್ 14 (ಬ್ಲಾಕ್ ನಂಬರ್ 15, 14 ಭಾಗಶಃ, ರಾಜಾ ಸೀಟ್ ರಸ್ತೆ, ಮಂಗಳೂರು ರಸ್ತೆ, ಬ್ರಾಹ್ಮಣರ ಬೀದಿ, ಚಾಮರಾಜ ವಿಲ್ಲಾ ರಸ್ತೆ)- ಹಿಂದುಳಿದ ವರ್ಗ `ಎ', ವಾರ್ಡ್ 15 (ಬ್ಲಾಕ್ ನಂಬರ್ 16, ಮಂಗಳಾ ದೇವಿ ನಗರ, ಜನರಲ್ ತಿಮ್ಮಯ್ಯ ರಸ್ತೆ, ಮಿಷನ್ ಕಂಪೌಂಡ್, ಮೂರ್ನಾಡು ರಸ್ತೆ)- ಪರಿಶಿಷ್ಟ ಜಾತಿ, ವಾರ್ಡ್ 16 (ಬ್ಲಾಕ್ ನಂಬರ್ 16 ಭಾಗಶಃ, ಬ್ಲಾಕ್ ನಂಬರ್ 17, ಬ್ಲಾಕ್ ನಂಬರ್ 18, ಮೂರ್ನಾಡು ರಸ್ತೆ ಬಲಭಾಗ, ಮಂಗಳೂರು ರಸ್ತೆ ಎಡಭಾಗ, ಮೈಸೂರು ರಸ್ತೆ ಮತ್ತು ಜಿ.ಟಿ. ರಸ್ತೆ) - ಸಾಮಾನ್ಯ ಮಹಿಳೆ, ವಾರ್ಡ್ 17 (ಬ್ಲಾಕ್ ನಂಬರ್ 18 ಭಾಗಶಃ, 17 ಭಾಗಶಃ, ಬ್ಲಾಕ್ ನಂಬರ್ 19, ಮೈಸೂರು ರಸ್ತೆ ಭಾಗಶಃ, ಶಿಕಾರಿ ಉಕ್ಕಡ, ಹಳೇ ಸಿದ್ದಾಪುರ ರಸ್ತೆ, ಪಿ.ಡಬ್ಲು.ಡಿ ಕ್ವಾಟರ್ಸ್)- ಹಿಂದುಳಿದ ವರ್ಗ `ಎ' ಮಹಿಳೆ, ವಾರ್ಡ್ 18 (ಬ್ಲಾಕ್ ನಂಬರ್ 18 ಭಾಗಶಃ, 17 ಭಾಗಶಃ, ಮೈಸೂರು ರಸ್ತೆ, ಸುದರ್ಶನ ವೃತ್ತ, ಪುಟಾಣಿ ನಗರ ಮತ್ತು ಜಯನಗರ)- ಸಾಮಾನ್ಯ, ವಾರ್ಡ್ 19 (ಬ್ಲಾಕ್ ನಂಬರ್ 22, 20, 23, 21, ಬಾಣೆಮೊಟ್ಟೆ, ಚೈನ್ಗೇಟ್ ರಸ್ತೆ, ಜ್ಯೂನಿಯರ್ ಕಾಲೇಜು ರಸ್ತೆ)- ಹಿಂದುಳಿದ ವರ್ಗ `ಎ', ವಾರ್ಡ್ 20 (ಬ್ಲಾಕ್ ನಂಬರ್ 23 ಭಾಗಶಃ, ದಾಸವಾಳ ರಸ್ತೆ,

ಕನ್ನಂಡಬಾಣೆ ಮತ್ತು ಸೋಮವಾರಪೇಟೆ ರಸ್ತೆ)- ಸಾಮಾನ್ಯ ಮಹಿಳೆ, ವಾರ್ಡ್ 21 (ಬ್ಲಾಕ್ ನಂಬರ್ 23 ಭಾಗಶಃ, ಫಾರೆಸ್ಟ್ ಕ್ವಾಟರ್ಸ್, ಸೋಮವಾರಪೇಟೆ ರಸ್ತೆ, ಕನ್ನಂಡಬಾಣೆ, ಪಂಪ್ ಹೌಸ್, ಹೌಸಿಂಗ್ ಬೋರ್ಡ್)- ಸಾಮಾನ್ಯ, ವಾರ್ಡ್ 22 (ಬ್ಲಾಕ್ ನಂಬರ್ 24 ಭಾಗಶಃ, ಮುತ್ತಪ್ಪ ದೇವಸ್ಥಾನ ರಸ್ತೆ, ಗದ್ದುಗೆ ಹಿಂಭಾಗ, ತ್ಯಾಗರಾಜ ಕಾಲೋನಿ) - ಸಾಮಾನ್ಯ ಹಾಗೂ ವಾರ್ಡ್ 23 (ಬ್ಲಾಕ್ ನಂಬರ್ 24 ಭಾಗಶಃ, ಗದ್ದುಗೆ ಹಿಂಭಾಗ, ಆಜಾದ್ ನಗರ, ಉಕ್ಕುಡ ರಸ್ತೆ, ರಾಜರಾಜೇಶ್ವರಿ ನಗರ) - ಸಾಮಾನ್ಯ ವರ್ಗಕ್ಕೆ ಮೀಸಲು ಮಾಡಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಲಿಖಿತವಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅವರಿಗೆ ಏಳು ದಿನಗಳ ಒಳಗಾಗಿ ದೂರು ಸಲ್ಲಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ವಿ. ರಾಮಪ್ಪ ತಿಳಿಸಿದ್ದಾರೆ.
ವಿಳಂಬವಾಗಲು ಕಾರಣ: ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಕಳೆದ ಮಾರ್ಚ್ನಲ್ಲಿಯೇ ನಡೆದಿತ್ತು. ಹಿಂದಿನ ಅಂದರೆ 2007ರಲ್ಲಿ ನಡೆದ ಚುನಾವಣೆಯ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಲಾಗಿತ್ತು. ಆದರೆ, ಮಡಿಕೇರಿ ನಗರಸಭೆಯ ಸ್ಥಿತಿ ಕೊಂಚ ಭಿನ್ನವಾಗಿತ್ತು.

2007ರಲ್ಲಿ ಮಡಿಕೇರಿ ಪುರಸಭೆಯನ್ನು ನಗರಸಭೆಗೆ ಏರಿಸಿದ್ದಲ್ಲದೇ 23 ವಾರ್ಡ್ಗಳನ್ನು 31 ವಾರ್ಡ್ಗಳನ್ನಾಗಿ ಪರಿವರ್ತಿಸಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆಯ ನಂತರ ಮಡಿಕೇರಿ ನಗರಸಭೆಯನ್ನು ಜನಸಂಖ್ಯೆ ಆಧಾರದ ಮೇಲೆ ಮೊದಲಿದ್ದಂತೆ 23 ವಾರ್ಡ್ಗಳನ್ನಾಗಿ ಪರಿವರ್ತಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿತು. ಹೀಗಾಗಿ 2007ರ ಮೀಸಲಾತಿಯನ್ನು 2013ರಲ್ಲಿ ಬಳಸಲು ಸಾಧ್ಯವಾಗಿರಲಿಲ್ಲ. 2011ರ ಜನಗಣತಿ ಈಚೆಗೆ ಪ್ರಕಟಗೊಂಡಿದ್ದು, ಇದರ ಆಧಾರದ ಮೇಲೆ ಹೊಸ ಮೀಸಲಾತಿಯನ್ನು ಈಗ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.