ಶುಕ್ರವಾರ, ಜೂನ್ 18, 2021
23 °C

ಮತಗಟ್ಟೆಯಲ್ಲಿ ವಿಶೇಷ ನೋಂದಣಿ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಇದೇ 9 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಜಿಲ್ಲೆಯ ಎಲ್ಲ ಮತಗಟ್ಟೆ­ಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳ­ಲಾಗಿದೆ ಎಂದು ಜಿಲ್ಲಾಧಿಕಾರಿ  ಮನೋಜ್ ಜೈನ್ ತಿಳಿಸಿದರು.ನವನಗರದ ತಮ್ಮ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾ­ಡಿದ ಅವರು, 2014 ಜನವರಿ 1ಕ್ಕೆ 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹು­ದಾಗಿದೆ ಹಾಗೂ ಮತದಾರರ ಗುರುತಿನ ಚೀಟಿ ಹೊಂದಿರುವವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದರು.ಇದೇ 19ರಂದು ನಾಮಪತ್ರ ಸಲ್ಲಿಕೆ ಆರಂಭ­ವಾಗಲಿದ್ದು, ನಾಮಪತ್ರ ಸಲ್ಲಿಸಲು ಇದೇ 26 ಕೊನೆಯ ದಿನಾಂಕವಾಗಿದೆ. ಇದೇ 27 ರಂದು ನಾಮಪತ್ರಗಳ ಪರಿಶೀಲನೆ, ಇದೇ 29 ರಂದು ನಾಮಪತ್ರ ಹಿಂತೆಗೆದುಕೊಳ್ಳುವ ದಿನವಾಗಿದೆ ಎಂದು ತಿಳಿಸಿದರು.ಏಪ್ರಿಲ್ 17 ರಂದು ಮತದಾನ  ನಡೆಯಲಿದೆ. ಮೇ 16 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ಮೇ 28 ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ನೀತಿ ಸಂಹಿತೆ ಉಲ್ಲಂಘನೆಯ ದೂರು ಹಾಗೂ ಚುನಾವಣಾ ಸಂಬಂಧ ಮಾಹಿತಿ ಪಡೆಯಲು ಶೀಘ್ರವೇ ಸಹಾಯವಾಣಿಯನ್ನು ಆರಂಭಿ­ಸಲಾಗು­ವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಸುವ್ಯವಸ್ಥಿತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ವಿವಿಧ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರಗೌಡ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ 15,27,360 ಮತದಾರರು

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ 15,27,360 ಮತದಾರರು ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ.2014ರ ಜನವರಿ 31ಕ್ಕೆ ಮತದಾರರ ಅಂತಿಮಪಟ್ಟಿ ಪ್ರಕಟಿಸ­ಲಾಗಿದ್ದು, ಅವರಲ್ಲಿ 7,73,168 ಪುರುಷ, 7,54,096 ಮಹಿಳಾ ಮತದಾರರು ಸೇರಿದಂತೆ 15,27, 360 ಮತದಾರರಿದ್ದಾರೆ.  ಮತದಾನ ಮಾಡಲು ಮತಯಾದಿ­ಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಇದೇ 16ರ ವರೆಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದಾಗಿದೆ. ಮತದಾ­ರರ ಹೆಸರು ಸೇರ್ಪಡೆ, ಮಾರ್ಪಾಡು ಕುರಿತಂತೆ ಇದೇ 9ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ.ಮತದಾರರು ಈ ಅವಕಾಶ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಚಿತ­ಪಡಿಸಿಕೊಳ್ಳಲು ಅಂದು ಮತಗಟ್ಟೆಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸ­ಬಹುದು.  ಒಂದೊಮ್ಮೆ ಹೆಸರಿಲ್ಲದಿದ್ದರೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ.ಮುಧೋಳ ಮತಕ್ಷೇತ್ರದಲ್ಲಿ 196 ಮತಗಟ್ಟೆಗಳಿದ್ದು, ಒಟ್ಟು 1,71,751 ಮತದಾರರಲ್ಲಿ 86,639 ಪುರುಷ ಹಾಗೂ 85,112 ಮಹಿಳಾ ಮತದಾರರಿದ್ದಾರೆ.ತೇರದಾಳ ಮತಕ್ಷೇತ್ರದಲ್ಲಿ 218 ಮತಗಟ್ಟೆಗಳಿದ್ದು, ಒಟ್ಟು 2,01,130 ಮತದಾರರಲ್ಲಿ 1,02,255 ಪುರುಷ ಹಾಗೂ 98,875 ಮಹಿಳಾ ಮತದಾರರಿದ್ದಾರೆ.ಜಮಖಂಡಿ ಮತಕ್ಷೇತ್ರದಲ್ಲಿ 213 ಮತಗಟ್ಟೆಗಳಿದ್ದು, ಒಟ್ಟು 1,81,963 ಮತದಾರರಲ್ಲಿ 92,419 ಪುರುಷ ಹಾಗೂ 89,544 ಮಹಿಳಾ ಮತದಾರರಿದ್ದಾರೆ.ಬೀಳಗಿ ಮತಕ್ಷೇತ್ರದಲ್ಲಿ 248 ಮತಗಟ್ಟೆಗಳಿದ್ದು, ಒಟ್ಟು 1,96,087 ಮತದಾರರಲ್ಲಿ 98,994 ಪುರುಷ ಹಾಗೂ 97,093 ಮಹಿಳಾ ಮತದಾರರಿದ್ದಾರೆ.ಬಾದಾಮಿ ಮತಕ್ಷೇತ್ರದಲ್ಲಿ 251 ಮತಗಟ್ಟೆಗಳಿದ್ದು, ಒಟ್ಟು 1,99,878 ಮತದಾರರಲ್ಲಿ 1,01,219 ಪುರುಷ ಹಾಗೂ 98,659 ಮಹಿಳಾ ಮತದಾರರಿದ್ದಾರೆ.ಬಾಗಲಕೋಟೆ ಮತಕ್ಷೇತ್ರದಲ್ಲಿ 233 ಮತಗಟ್ಟೆ­ಗಳಿದ್ದು, ಒಟ್ಟು 2,06,845 ಮತದಾರರಲ್ಲಿ 1,04,704 ಪುರುಷ ಹಾಗೂ 1,02,141 ಮಹಿಳಾ ಮತದಾರರಿದ್ದಾರೆ.ಹುನಗುಂದ ಮತಕ್ಷೆತ್ರದಲ್ಲಿ 241 ಮತಗಟ್ಟೆ­ಗಳಿದ್ದು, ಒಟ್ಟು 1,96,799 ಮತದಾರರಲ್ಲಿ 98,786 ಪುರುಷ ಹಾಗೂ 98,013 ಮಹಿಳಾ ಮತದಾರರಿದ್ದಾರೆ.ನರಗುಂದ ಮತಕ್ಷೇತ್ರದಲ್ಲಿ 209 ಮತಗಟ್ಟೆಗಳಿದ್ದು, ಒಟ್ಟು 1,72,907 ಮತದಾರರಲ್ಲಿ 88,152 ಪುರುಷ ಹಾಗೂ 84,755 ಮಹಿಳಾ ಮತದಾರರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.