ಹುಬ್ಬಳ್ಳಿ: ಹೆಚ್ಚೆಚ್ಚು ಮಂದಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಚುನಾವಣಾ ಆಯೋಗ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಟ ಅಮಿತಾಭ್ ಬಚ್ಚನ್, ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಸಹಿತ ಜನಪ್ರಿಯ ತಾರೆಯರನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಆದಾಗ್ಯೂ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಮಾತ್ರ ಪ್ರಗತಿ ಕಂಡಿಲ್ಲ ಎನ್ನುತ್ತವೆ ಅಂಕಿಅಂಶಗಳು.

ಕಳೆದ ಎರಡು ದಶಕದಲ್ಲಿ ನಡೆದ ನಾಲ್ಕು ಚುನಾವಣೆಗಳ ಪೈಕಿ 2009ರಲ್ಲಿ ನಡೆದ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಪ್ರಮಾಣದ ಮತದಾನ ದಾಖಲಾಗಿದೆ. ವಿಧಾನಸಭೆ ಚುನಾವಣೆಗೆ ತೋರುವ ಆಸಕ್ತಿಯನ್ನು ಮತದಾರ ಲೋಕಸಭೆಗೆ ತೋರಿಲ್ಲ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ 1991ರ ಚುನಾವಣೆಯಲ್ಲಿ ಒಟ್ಟಾರೆ ಕನಿಷ್ಠ, ಅಂದರೆ ಶೇ 50.96ರಷ್ಟು ಪ್ರಮಾಣದಲ್ಲಿ ಮತದಾನ
ನಡೆದಿದೆ. ಆ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ಡಿ.ಕೆ. ನಾಯ್ಕರ್ ಗೆಲುವು ಸಾಧಿಸಿದ್ದರು. 1977ರಲ್ಲಿ ಗರಿಷ್ಠ ಪ್ರಮಾಣದಲ್ಲಿ, ಅಂದರೆ ಶೇ 68.73 ರಷ್ಟು ಮತದಾನವಾಗಿದ್ದು, ಕಾಂಗ್ರೆಸ್ನ ಸರೋಜಿನಿ ಮಹಿಷಿ ಜಯ ಗಳಿಸಿದ್ದರು.

ತಿರಸ್ಕೃತ ಮತಗಳ ಪ್ರಮಾಣ ಕ್ಷೀಣ: ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯಿಂದ ಇಡೀ ಮತದಾನ ಪ್ರಕ್ರಿಯೆ ಪೂರ್ಣ ಸರಳೀಕರಣಗೊಳ್ಳುವುದರ ಜೊತೆಗೆ ತಿರಸ್ಕೃತಗೊಂಡ ಮತಗಳ ಪ್ರಮಾಣವೂ ಕಡಿಮೆಯಾಗಿರುವುದು ಸಮಾಧಾನದ ಸಂಗತಿ. 2004ರ ಲೋಕಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಲಾಯಿತು. ಮತಯಂತ್ರ ಬಳಕೆಯ ಬಗ್ಗೆ ಜನರಿಗೆ ತಿಳಿ ಹೇಳಲಾಯಿತು. ಆ ಬಾರಿ ಕ್ಷೇತ್ರದಲ್ಲಿ ಕೇವಲ 338 ಮತಗಳಷ್ಟೇ ತಿರಸ್ಕೃತಗೊಂಡವು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ, ಅಂದರೆ 1999ರಲ್ಲಿ 32,113 ಮತಗಳು ತಿರಸ್ಕೃತಗೊಂಡಿದ್ದು ಈವರೆಗಿನ ದಾಖಲೆಯಾಗಿದೆ. ಆ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 7.52 ಲಕ್ಷ ಮತಗಳಲ್ಲಿ ಶೇ 4.27ರಷ್ಟು ಮತಗಳು ತಿರಸ್ಕೃತವಾಗಿದ್ದವು.

ಕಳೆದ ಬಾರಿಯ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು ಮತಗಳ ಪೈಕಿ ನೂರಕ್ಕೂ ಕಡಿಮೆ ಮತಗಳು ತಿರಸ್ಕೃತಗೊಂಡಿದ್ದು, ಅಭ್ಯರ್ಥಿಗಳ ಖಾತೆಗೆ ಬಹುತೇಕ ಮತಗಳು ಸಂದಾಯವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.