ಮಂಗಳವಾರ, ಜೂನ್ 15, 2021
21 °C

ಮತದಾರರ ಪಟ್ಟಿ ಸೇರಲು ಒಂದೇ ದಿನ 3 ಲಕ್ಷ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹೊಸದಾಗಿ 6.14 ಲಕ್ಷ ಅರ್ಜಿಗಳು ಬಂದಿವೆ ಎಂದು ರಾಜ್ಯದ ಮುಖ್ಯಚುನಾವಣಾಧಿಕಾರಿ ಅನಿಲ್‌­ಕುಮಾರ್‌ ಝಾ ಹೇಳಿದರು.ಫೆಬ್ರುವರಿ 1 ರಿಂದ ಮಾರ್ಚ್‌ 7ರವರೆಗೆ 3.14 ಲಕ್ಷ ಅರ್ಜಿಗಳು ಬಂದಿದ್ದವು. ಭಾನುವಾರ ಸುಮಾರು 3 ಲಕ್ಷ ಅರ್ಜಿಗಳು ಬಂದಿವೆ ಎಂದು ಸೋಮ­ವಾರ ಇಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.ಬೆಂಗಳೂರು ನಗರದಲ್ಲೇ 79 ಸಾವಿರ ಅರ್ಜಿಗಳು ಬಂದಿವೆ. ಇಂಟರ್‌­ನೆಟ್‌ ಮೂಲಕ 37 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಮಾರ್ಚ್‌ 16ರ­ವರೆಗೂ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇದೆ ಎಂದರು.ಅರ್ಜಿ ಸಲ್ಲಿಸಿದ  ನಂತರ 10 ದಿನ­ದಲ್ಲಿ ಪರಿಶೀಲನೆ ನಡೆಸಿ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತದೆ. ಇದಾದ ವಾರದಲ್ಲಿ ಗುರುತಿನ ಚೀಟಿ ನೀಡಲಾ­ಗು­ತ್ತದೆ ಎಂದು ತಿಳಿಸಿದರು.ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳ ಮೂಲಕ ಗುರುತಿನ ಚೀಟಿ ಪಡೆಯಬಹುದು ಎಂದರು.ರಾಜ್ಯದಲ್ಲಿ 54,261 ಮತಗಟ್ಟೆ­ಗಳಿವೆ. 68 ಸಾವಿರ ಎಲೆಕ್ಟ್ರಾನಿಕ್‌ ಮತ­ಯಂತ್ರ ಗಳಿದ್ದು, ಅವುಗಳ ತಪಾಸಣೆ ನಡೆ­ದಿದೆ. ರಾಜ್ಯದಲ್ಲಿ ಮತಯಂತ್ರಗಳ ಕೊರತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆ­ಯಲ್ಲಿ ಮತಯಂತ್ರಗಳು ಇವೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.