ಧಾರವಾಡ: ತಮ್ಮ ಧರ್ಮಕ್ಕೆ ಸೇರಲು ನಿರಾಕರಣೆ ಮಾಡಿದ್ದರಿಂದ ಆ ಕುಟುಂಬದ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಕುಂದಗೋಳ ತಾಲ್ಲೂಕಿನ ಮತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಕಳೆದ ಆರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಶುಕ್ರವಾರ ಇಡೀ ಕುಟುಂಬವು ಜಿಲ್ಲಾಧಿಕಾರಿ ದರ್ಪಣ ಜೈನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕುಟುಂಬದವರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳ ದಲ್ಲಿಯೇ ಇದ್ದ ಕುಂದಗೋಳ ತಹಶೀಲ್ದಾರರಿಗೆ ತಕ್ಷಣವೇ ದೂರು ದಾಖಲಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶಿಸಿದರು.

ಮತ್ತಿಕಟ್ಟಿಯ ದಲಿತ ಸಮಾಜದ ಚಿಟ್ಟಿಬಾಬು ಕೊಂಡಿಪೋಗು ಎಂಬ ವ್ಯಕ್ತಿ ಕೂಲಿ, ಭಂಗಿ ಕೆಲಸ ಮಾಡುತ್ತ ಬಹಳ ವರ್ಷಗಳಿಂದ ವಾಸವಾಗಿದ್ದಾನೆ. ಇದೇ ಗ್ರಾಮದ ಮರ್ದಾನಬಿ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆ ಯಾಗಿದ್ದು, ಈಗ ಅವಳ ಹೆಸರು ಮಂಜವ್ವ ಎಂದು ಬದಲಾಗಿದ್ದು, ಇವರಿಗೆ ಏಳು ಜನ ಮಕ್ಕಳಿದ್ದಾರೆ.

`ಈಗಿರುವ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಶಾನಬಿ ನಾಯಕ ಎಂಬು ವರ ಮಗ ಸಾಜನ್ ಎಂಬಾತನು ಹಲ್ಲೆ ನಡೆಸಿದ್ದಾನೆ. ನಮಗೆ ಮಂಜೂರಾಗಿದ್ದ ಆಶ್ರಯ ಮನೆಯನ್ನು ಸಹ ಕಟ್ಟಲು ಅವಕಾಶ ನೀಡುತ್ತಿಲ್ಲ. ಕುಡಿಯುವ ನೀರಿನ ಸಂಪರ್ಕ ಸಹ ಕಟ್ ಮಾಡಿದ್ದಾನೆ~ ಎಂದು ಚಿಟ್ಟಿಬಾಬುನ ಪತ್ನಿ ಮಂಜವ್ವ ಹೇಳಿದರು.

`ನನ್ನ ಮೇಳೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದಾಗ ನನ್ನ ಪತ್ನಿ ನಡುವೆ ಬಂದಿದ್ದರಿಂದ ಆಕೆಯ ಭುಜಕ್ಕೆ ಏಟಾಗಿದೆ. ನನ್ನ ಹಿರಿಯ ಪುತ್ರ ನಾಗರಾಜನ ಮೇಲೂ ಚಾಕುವಿನಿಂದ ಹೊಡೆ ದಿದ್ದಾನೆ. ಇದರಿಂದ ಹೆದರಿ ಪತ್ನಿ ಹಾಗೂ ಹಿರಿಯ ಪುತ್ರನನ್ನು ಕರೆದುಕೊಂಡು ಹೊಲದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದೇವೆ.

ಉಳಿದ ಮಕ್ಕಳಿಗೂ ಸಹ ಇವರು ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದರೆ ಅವರೂ ಸಹ ಸ್ವೀಕರಿಸಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬರಬೇಕಾ ಯಿತು~ ಎಂದು ಚಿಟ್ಟಿಬಾಬು ಪತ್ರಕರ್ತರ ಎದುರು ತಮ್ಮ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.