ಮತ್ತೂರು: 6 ಕಾಲಿನ ಟಗರು

ಬುಧವಾರ, ಮೇ 22, 2019
29 °C

ಮತ್ತೂರು: 6 ಕಾಲಿನ ಟಗರು

Published:
Updated:

ಕೊಪ್ಪಳ: ಟಗರಿಗೆ ನಾಲ್ಕು ಕಾಲುಗಳಿರುವುದು ಸಾಮಾನ್ಯ ಸಂಗತಿ. ಆದರೆ, ಈ ಟಗರಿಗೆ 6 ಕಾಲುಗಳಿವೆ. ಇದೇ ವಿಷಯಕ್ಕಾಗಿ ಈಗ ಈ ಪ್ರಾಣಿ ಅಚ್ಚರಿಗೆ ಮಾತ್ರವಲ್ಲ ಆಕರ್ಷಣೆಗೂ ಕಾರಣವಾಗಿದೆ.ತಾಲ್ಲೂಕಿನ ಮತ್ತೂರು ಗ್ರಾಮದ ಬಳಿ ಬಿಡಾರ ಹೂಡಿರುವ ಚಿಕ್ಕೋಡಿ ತಾಲ್ಲೂಕಿನ ವಾಸಪ್ಪ ಎಂಬ ಕುರಿಗಾರರ ಹಟ್ಟಿಯಲ್ಲಿರುವ ಈ ಟಗರಿಗೆ 6   ಕಾಲುಗಳಿವೆ.ಮುಂದಿನ ಕಾಲುಗಳು ಹಾಗೂ ಕುತ್ತಿಗೆ ನಡುವೆ ಇರುವ ಈ ಕಾಲುಗಳು ನೆಲಕ್ಕೆ ತಾಗುವುದಿಲ್ಲ. ಇವುಗಳ ಸಹಾಯದಿಂದ ಟಗರು ನಡೆಯುವುದೂ ಇಲ್ಲ. ಈ ರೀತಿ ಎರಡು ಕಾಲುಗಳು ಹೆಚ್ಚುವರಿಯಾಗಿ ಇರುವ ಟಗರು ಜನಿಸಿದ ಸಂದರ್ಭದಲ್ಲಿ ಆತಂಕವಾಗಿದ್ದು ನಿಜ. ಈ ಟಗರು ಬದುಕುತ್ತೋ ಇಲ್ಲವೋ ಎಂಬ ಅನುಮಾನವೂ ಇತ್ತು ಎನ್ನುತ್ತಾರೆ ಇದರ ಮಾಲಿಕ ವಾಸಪ್ಪ.ಆದರೆ, ಎಲ್ಲ ಸಾಮಾನ್ಯ ಟಗರುಗಳ ಹಾಗೆ ಇದು ಕೂಡ ಬೆಳೆಯುತ್ತಿದೆ. ಈ ಟಗರು ಜನಿಸಿದ ನಂತರ ನಮ್ಮ ಅದೃಷ್ಟ ಖುಲಾಯಿಸಿದೆ ಎಂದು ಹೇಳಲು ಸಹ ಮರೆಯಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಪಿ.ಎಂ.ನಿಂಬರಗಿ, ಇಂತಹ ಟಗರುಗಳು ಜನಿಸುವುದು ಅಪರೂಪ               ಎನ್ನುತ್ತಾರೆ.ಈ ಟಗರಿನ ಬೆಳವಣಿಗೆಯಲ್ಲಿ ತೊಂದರೆಯೇ ಈ ರೀತಿ ಕಾಲುಗಳ ಆಕಾರದ ಅಂಗಗಳು ಬೆಳೆದಿವೆ ಎಂದೂ ಹೇಳುತ್ತಾರೆ.ಕಾರಣಗಳು ಏನೇ ಇದ್ದರೂ, ಈ ಟಗರು ಮಾಲಿಕರ ಪಾಲಿನ ಅದೃಷ್ಟದ ಪ್ರಾಣಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಕರ್ಷಣೆಯ ಕೇಂದ್ರ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry