ಅಪ್ಪ, ಅಮ್ಮ ಮತ್ತು ಮತದಾನದ ಅರ್ಹತೆ ಪಡೆದವರೆಲ್ಲರೂ ಮತ ಚಲಾಯಿಸಬೇಕು ಎಂದು ಜಾಗೃತಿ ಮೂಡಿಸುವ ಅಭಿಯಾನದ ಅಂಗವಾಗಿ ‘ಪ್ಲೆಡ್ಜ್ ಟು ವೋಟ್’ ಸಂಘಟನೆ ಇದೇ ಭಾನುವಾರ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಮುಂಬರುವ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಇದಕ್ಕಾಗಿ ಮಕ್ಕಳು ನೀಡುವ ಪ್ರೇರಣೆ ಪರಿಣಾಮಕಾರಿಯಾಗಿರುತ್ತದೆ ಎಂಬ ಉದ್ದೇಶದಿಂದ ಆಯೋಜಿಸಿರುವ ‘ಅಮ್ಮ ಅಪ್ಪ ಪ್ಲೆಡ್ಜ್ ೨ ವೋಟ್’ ಚಿತ್ರಕಲಾ ಸ್ಪರ್ಧೆಗೆ ಕೇಂದ್ರ ಚುನಾವಣಾ ಆಯೋಗ ಸೇರಿದಂತೆ ನಗರದ ಹಲವು ಕಂಪೆನಿಗಳು ಬೆಂಬಲ ನೀಡಿವೆ.

ತೀರ್ಪುಗಾರರ ಮೆಚ್ಚುಗೆ ಪಡೆಯುವ ಚಿತ್ರಗಳಿಗೆ ಕೊಡುಗೆಗಳನ್ನು ಬಿಗ್ಬ್ಯಾಂಗ್ಆಫರ್.ಕಾಮ್ ನೀಡಲಿದೆ. ಮಾ. ೨೩ರ ಭಾನುವಾರ ಬೆಳಿಗ್ಗೆ ೧೦ಕ್ಕೆ ಕಬ್ಬನ್ ಪಾರ್ಕ್ನ ಪ್ರೆಸ್ ಕ್ಲಬ್ ಆವರಣದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ೧೧ ಗಂಟೆಯವರೆಗೂ ನೋಂದಣಿ ನಡೆಯಲಿದೆ. ಮೊದಲು ನೋಂದಣಿಯಾದ ನೂರು ಜನರಿಗೆ ವಿಶೇಷ ಕೊಡುಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ನೋಂದಣಿಗಾಗಿ
೯೯೮೬೪ ೭೧೮೭೮/ ೦೯೯೬೨೦ ೨೦೨೦೫ಕ್ಕೆ ಎಸ್ಎಂಎಸ್ ಕಳುಹಿಸಬಹುದು ಎಂದು ಸಂಸ್ಥಾಪಕ ವಿಜಯ್ ಗ್ರೋವರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.