ರಾಮದುರ್ಗ: ಬೈಲಹೊಂಗಲ ತಾಲ್ಲೂಕಿನ ಮಾರಗನಕೊಪ್ಪದಲ್ಲಿ ನಡೆಯಲಿದ್ದ ಸೋಲಾಪುರದ ರವಿ ಗೊಳಸಂಗಿ ಅವರ ಮದುವೆಗೆ ಹೋಗಿ ಅಕ್ಷತೆ ಹಾಕಿ ಬಾಯ್ತುಂಬ ಹರಸಿ ಬರಲು ಹೊರಟಿದ್ದ ಸಂಬಂಧಿಗಳು ಜವರಾಯನ ಅಟ್ಟಹಾಸದಿಂದಾಗಿ ಮಸಣ ಸೇರಿದರು. ಮದುವೆಯ ಸಂಭ್ರಮದಲ್ಲಿ ಮೆರೆಯಬೇಕಿದ್ದ ವಧು-ವರರ ಸಂಬಂಧಿಗಳು ಶೋಕ ಸಾಗರದಲ್ಲಿ ಮುಳುಗಿದರು.

ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಸಮೀಪ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 7.30ರ ಹೊತ್ತಿಗೆ ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ಐಸರ್ ಲಾರಿಯೊಂದು ಇನ್ನೊಂದು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳೆಯರು ಸೇರಿದಂತೆ 10 ಜನರು ಇಹಲೋಕವನ್ನು ತ್ಯಜಿಸಿದರು. ಸುಮಾರು 10ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿರುವುದರಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿತು.

ಬೈಲಹೊಂಗಲ ತಾಲ್ಲೂಕಿನ ಮಾರಗನಕೊಪ್ಪದ ರುದ್ರಪ್ಪ ಮೇದಾರ ಎಂಬುವರ ಪುತ್ರಿ ಪುಷ್ಪಾ ಮತ್ತು ಸೋಲಾಪುರದ ಶಾಂತಿ ನಗರದ ರವಿ ಗೊಳಸಂಗಿ ಅವರ ವಿವಾಹದಲ್ಲಿ ಪಾಲ್ಗೊಳ್ಳಲಿದ್ದ ದಿಬ್ಬಣದ ಮಂದಿಯನ್ನೆಲ್ಲ ಹೊತ್ತೊಯ್ಯುತ್ತಿದ್ದ ಲಾರಿಯು ಅಪಘಾತಕ್ಕೀಡಾಗಿದೆ.

ಸೋಲಾಪುರದ ವರನಾದ ರವಿ ಗೊಳಸಂಗಿ ವಾಹನವೊಂದರಲ್ಲಿ ರಾತ್ರಿಯೇ ಮಾರಗನಕೊಪ್ಪ ಗ್ರಾಮಕ್ಕೆ ತೆರಳಿದ್ದರು. ಮದುವೆ ಸಮಾರಂಭದಲ್ಲಿ ಭಾಗವಹಿಸಲು ಐಸರ್ ವಾಹನದಲ್ಲಿ ರಾತ್ರಿ 12-30ಕ್ಕೆ ಸೋಲಾಪುರದಿಂದ ಸುಮಾರು 50 ಜನರು ಸಂಭ್ರಮದಿಂದಲೇ ಹೊರಟಿದ್ದರು. ರಾತ್ರಿಯೆಲ್ಲ ಮೋಜು- ಮಸ್ತಿ ಮಾಡುತ್ತ ಆಗಮಿಸುತ್ತಿದ್ದ ದಿಬ್ಬಣದವರು ಬೆಳಿಗ್ಗೆ ಲೋಕಾಪುರದಲ್ಲಿ ಚಹ ಕುಡಿದು ಬೈಲಹೊಂಗಲದತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಸಾಲಹಳ್ಳಿ ಸಮೀಪ ಸಂಭವಿಸಿದ ಅಪಘಾತ ಶೋಕದ ಮಡುವಿಗೆ ನೂಕಿತು.

`ನಿದ್ರೆಯ ಮಬ್ಬಿನಲ್ಲಿದ್ದ ಚಾಲಕ ಮುಂದೆ ಜೋಳದ ಮೂಟೆಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯನ್ನು ಹಿಂದೆ ಹಾಕಲು ಯತ್ನಿಸಿದ್ದಾರೆ. ಪ್ರಯಾಣಿಕರೆಲ್ಲರೂ ನಿದ್ರೆಗೆ ಜಾರಿದ್ದರು. ಏಕಾಏಕಿ ಎದುರಿಗೆ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದರು ಎಂದು ದಿಬ್ಬಣದ ವಾಹನದಲ್ಲಿ ಸಾಗುತ್ತಿದ್ದ ಕೇಸರ ರತ್ನಾಭಾಯಿ ವಾಡತೀಲೆ `ಪ್ರಜಾವಾಣಿ~ಗೆ ತಿಳಿಸಿದರು.

`ಸಾಲಹಳ್ಳಿ ಗ್ರಾಮದಿಂದ ಸುಮಾರು 5 ಕಿ.ಮೀ. ಅಂತರದಲ್ಲಿ ಅಪಘಾತ ಸಂಭವಿಸಿದ್ದರಿಂದ ರಸ್ತೆಯಲ್ಲಿ ಯಾರೂ ಇರಲಿಲ್ಲ. ಸ್ಥಳದಲ್ಲೇ ಮೃತಪಟ್ಟವರ ಮತ್ತು ಗಾಯಗೊಂಡವರ ಗೋಳನ್ನು ಕೇಳುವವರೇ ಇರಲಿಲ್ಲ. ಈ ಅಪಘಾತದಲ್ಲಿ ಪಾರಾಗಿರುವುದು ನಮ್ಮ ಪಾಲಿಗೆ `ಮರುಜನ್ಮ~ ಪಡೆದಂತಾಗಿದೆ ಎಂದು ಅವರು ದಃಖದಿಂದ ನುಡಿದರು.

`ನನ್ನ ಕಾಕಾನ ಮಗನ ಮದುವೆಗೆಂದು ಲಾರಿ ಏರಿದೆ. ದಿಬ್ಬಣದಲ್ಲಿರುವವರ ಪರಿಚಯ ಇಲ್ಲ. ಇದೀಗ ಇಲ್ಲಿ ಹೆಣಗಳ ರಾಶಿ ನೋಡಿದರೆ ಭಯವಾಗುತ್ತದೆ. ಯಾರ ಹೆಣ, ಯಾರಿಗೆ ಗಾಯವಾಗಿದೆ ಎಂಬುದು ತಿಳಿಯುತ್ತಿಲ್ಲ. ಮದುವೆಗೆ ಬಂದು ಪ್ರಾಣ ಕಳೆದು ಕೊಳ್ಳು ವಂತಾಯಿತು ಎಂದು ವಿಜಾಪುರದಲ್ಲಿ ಈ ಲಾರಿ ಏರಿದ್ದ ವರನ ಸಂಬಂಧಿ ಶಂಕರ ಗೊಳಸಂಗಿ `ಪ್ರಜಾವಾಣಿ~ಗೆ ತಿಳಿಸುವಾಗ ಅಪಘಾತದ ಆಘಾತದಿಂದ ಇನ್ನೂ ಹೊರ ಬಂದಿರಲಿಲ್ಲ.

ಅಪಘಾತದ ಭೀಕರತೆಯಿಂದ ರಸ್ತೆಯ ತುಂಬೆಲ್ಲಾ ರಕ್ತದ ಮಡುವು ಕಾಣುತ್ತಿತ್ತು. ದೇಹದ ಭಾಗಗಳು ರಸ್ತೆಯ ತುಂಬ ಚೆಲ್ಲಾಡಿ ಕೊಂಡಿದ್ದವು. ಅಪಘಾತದ ಸುದ್ದಿ ತಿಳಿದು ಮದುವೆ ಮನೆಯಿಂದ ವಾಪಸ್ಸಾದ ಸಂಬಂಧಿಕರ ರೋದನ ಮನ ಕಲಕುತ್ತಿತ್ತು.

ಹಲವು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು. ಶವಗಳ ಗುರುತು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

ಬೈಲಹೊಂಗಲದ ಡಿವೈಎಸ್ಪಿ ಎಸ್. ಬಿ. ಪಾಟೀಲ ನೇತೃತ್ವದ ತಂಡ ಶವಗಳ ಸಾಗಾಟಕ್ಕೆ ಶ್ರಮಿಸಿದರು. ಉತ್ತರ ವಲಯ ಡಿಜಿಪಿ ಕೆ.ಎಸ್. ಆರ್. ಚರಣರಡ್ಡಿ, ಎಸ್ಪಿ ಸಂದೀಪ ಪಾಟೀಲ, ಡಿವೈಎಸ್ಪಿ ಎಸ್.ಬಿ. ಪಾಟೀಲ, ಪ್ರಭಾರಿ ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ, ತಹಶೀಲ್ದಾರ ಗೀತಾ ಕೌಲಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮದುವೆಗೆ ಮುನ್ನವೇ ಭಾರಿ ಅಪಘಾತವಾಗಿ ಸಂಬಂಧಿಕರು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿದ್ದ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.