ಮದುವೆಮನೆ

7

ಮದುವೆಮನೆ

Published:
Updated:
ಮದುವೆಮನೆ

ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಮದುವೆಮನೆ’ಗೆ ಯೋಗರಾಜ್‌ಭಟ್ ಬರೆದಿರುವ ‘ಒಳ್ಳೆಯ ರೀತಿಯಲ್ಲಿ ಮಾತನೊಂದ’ ಹಾಡಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಿತು. ರೈಲು ಪ್ರಯಾಣದೊಂದಿಗೆ ಈ ಹಾಡಿನ ಚಿತ್ರೀಕರಣ ಸಾಗಿತು. ರಾಮು ನೃತ್ಯ ನಿರ್ದೇಶನದಲ್ಲಿ ನಾಯಕಿ ಶ್ರದ್ಧಾ ಆರ್ಯ ಮತ್ತು 50ಜನ ನರ್ತಕರು ಹೆಜ್ಜೆ ಹಾಕಿದರು.ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ಸುನೀಲ್‌ಕುಮಾರ್‌ಸಿಂಗ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ನಿರ್ದೇಶಕರಿಗೆ ಇದು ಚೊಚ್ಚಲ ಚಿತ್ರ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರು ರವರ ಛಾಯಾಗ್ರಹಣ, ಕೃಷ್ಣ ಲೇಖನ ಸಹನಿರ್ದೇಶನ, ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ ಹಾಗೂ ಮೋಹನ್ ಬಿ. ಕೆರೆ ಕಲಾನಿರ್ದೇಶನವಿದೆ. ಅವಿನಾಶ್(ಜುಗಾರಿ), ತಬಲಾ ನಾಣಿ, ಶರಣ್, ಅರವಿಂದ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್ ಇತರರು ತಾರಾಗಣದಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry