ಮದ್ದೂರು: ಪಟ್ಟಣದ ಹೊಳೆಬೀದಿಯಲ್ಲಿರುವ ಶಕ್ತಿದೇವತೆ ರೇಣುಕಾ ಎಲ್ಲಮ್ಮದೇವಿ ದೇಗುಲದಲ್ಲಿ ಏ.24ರ ಮಂಗಳವಾರ ಅಕ್ಷಯ ತೃತೀಯ ವಿಶೇಷ ದಿನದ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ.
ರಾಜ್ಯದಲ್ಲಿ ವಿಶೇಷ ಭಕ್ತ ಸಮೂಹ ಒಳಗೊಂಡಿರುವ ರೇಣುಕಾ ಎಲ್ಲಮ್ಮದೇವಿಯ ಈ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

ದೇಗುಲದ ಪ್ರಧಾನ ಆರ್ಚಕ ನಿರಂಜನಾಚಾರ್ಯ ಅವರ ನೇತೃತ್ವದಲ್ಲಿ ಏ.24ರ ಬೆಳಿಗ್ಗೆ 8.30ರಿಂದ ದೇವಿಗೆ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 11.30ರೊಳಗೆ ಲೋಕ ಕಲ್ಯಾಣಾರ್ಥವಾಗಿ ರೇಣುಕಾ ದೇವಿಗೆ ಸುವರ್ಣ ಮಾಂಗಲ್ಯ ಹರಕೆ ಅರ್ಪಿಸುವ ಕಾರ್ಯ ನಡೆಯಲಿದೆ.

ಮಧ್ಯಾಹ್ನದ ವೇಳೆಗೆ ದೇವಿಗೆ ವಿಶೇಷ ಹೂವಿನ ಅಲಂಕಾರ ನೆರವೇರಲಿದ್ದು, ಮಹಾ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಷಯ ತೃತೀಯ ವಿಶೇಷ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸುಮಂಗಲಿಯರಿಗೆ ಹೂವು, ಬಳೆ, ಅರಿಶಿಣ-ಕುಂಕುಮ ವಿತರಿಸಲಾಗುತ್ತಿದೆ. ಮಾಂಗಲ್ಯ ಹರಕೆ ಅರ್ಪಿಸುವ ಭಕ್ತಾದಿಗಳು ಹೆಚ್ಚಿನ ವಿವರಗಳಿಗೆ ಟಿ.ಶ್ರೀನಿವಾಸ್, ಧರ್ಮದರ್ಶಿ (ಮೊ.9844259632) ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.