ನಿಡಗುಂದಿ: ನಿಡಗುಂದಿಯಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ತಾಲ್ಲೂಕಿನ ಕಲಾವಿದರ ಕಲಾಕೃತಿಗಳು ಗಮನಸೆಳೆದವು.

ನವ್ಯ, ಸಕಾಲಿನ ಕಾಲಕೃತಿ, ಅಪರೂಪದ ಚಿತ್ರಗಳು, ನಿಸರ್ಗ ಕಲಾಕೃತಿ ಗಳಲ್ಲಿ ತಾಲ್ಲೂಕಿನ ಉದಯೋನ್ಮುಖ ಕಲಾವಿದರ ಚಿತ್ರ ಗಳು ಪ್ರದರ್ಶನ ಕ್ಕಿದ್ದವು. ಜಲವರ್ಣ, ಅಕ್ರೆಲಿಕ್, ಓಪೇಕ್ ಪೋಸ್ಟರ್, ತೈಲವರ್ಣದ ಕಲಾಕೃತಿ ಗಳಾಗಿದ್ದವು.

ಬಸವನಬಾಗೇವಾಡಿಯ ರಾಜಾರವಿ ವರ್ಮ ಚಿತ್ರಕಲಾ ಹಾವಿದ್ಯಾಲಯದ ಬಹುತೇಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಎಸ್.ಸಿ. ಮುರಗಾನೂರ ಅವರ ಡೋಳು ವಾದನದೊಂದಿಗೆ ಪಲ್ಲಕ್ಕಿ ಮೆರವಣಿಗೆ ಚಿತ್ರ , ಆರ್.ಆರ್. ಸಿದ್ದಾಪೂರ ಅವರ ಅಕ್ಕಹಾದೇವಿ, ಶಂಕರಾಚಾರ್ಯ, ಬಸವೇಶ್ವರರ ಚಿತ್ರ ಅಕ್ರೆಲಿಕ್ನಲ್ಲಿ ಮೂಡಿ ಬಂದಿದ್ದವು.

ಆಲಮಟ್ಟಿಯ ಅಂತರರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಕಲಾವಿದೆ ಶರಣಮ್ಮ ಕುಮಸಿ (ಕೌಲಗಿ) ಅವರ ಗ್ರಾಮೀಣ ಮಹಿಳೆಯರ ಸಭಾ ಕಟ್ಟೆಯೂ ಮಹಿಳೆಯರ ನೈಜ ಚಿತ್ರಣ ಬಿಂಬಿಸಿತು. ಎಸ್.ರಾಘವೇಂದ್ರ ಸೋಮನಕಟ್ಟಿ ಅವರ ಅಕ್ರೆಲಿಕ್ ಪೇಟಿಂಗ್ನಲ್ಲಿ ಬಸವೇಶ್ವರರ, ಗಣಪತಿಯ ಚಿತ್ರಗಳು ನೈಜವಾಗಿದ್ದವು.

ಜೆ.ಎಸ್. ಸಜ್ಜನ ಅವರ ಪರಿಸರ ನಾಶ, ಬಿ.ಸಿ. ಮುರಗಾನೂರ ಅವರ ಕೃಷ್ಣಾ ರಾಧಾರ ಮುರಳಿ ಗಾಯನ, ಶಿಕ್ಷಕ ಜೆ.ಎನ್. ರೂಗಿ ಅವರ ಬಾಟಿಕ್ ಆರ್ಟ್ನಲ್ಲಿ ಮೂಡಿ ಬಂದ ಅಜಂತಾದಲ್ಲಿ ಸಿಕ್ಕ ಯಶೋಧಾ ಚಿತ್ರಗಳು ನೋಡುಗರನ್ನು ಸೆಳೆದವು.

ಅಸಮಾಧಾನ: ಕೃತಿಗಳನ್ನು ಸುರಕ್ಷಿತ ವಾಗಿ ಪ್ರದರ್ಶಿಸಲು ಸಂಘಟಕರು ಯಾವುದೇ ಸಹಕಾರ ನೀಡಿಲ್ಲ ಹಾಗೂ ಯಾವುದೇ ವ್ಯವಸ್ಥೆಯೂ ಮಾಡಿಲ್ಲ, ಪ್ರದರ್ಶಿಸಿದ ಎಲ್ಲಾ ಕಲಾವಿದರಿಗೂ ಗೌರವ ಧನ ಬೇಡ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಯನ್ನಾದರೂ ನೀಡಬೇಕಿತ್ತು ಎಂದು ಅಂತರರಾಜ್ಯ ಕಲಾವಿದೆ ಶರಣಮ್ಮ ಕುಮಸಿ (ಕೌಲಗಿ) ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.