ಸೋಮವಾರ, ಜೂನ್ 14, 2021
28 °C

ಮನೆ ರಕ್ಷಣೆಯ ಸಾಧನ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠಾಣೆ (ಪಿಟಿಐ): ಮನೆಯಲ್ಲಿದ್ದವ­ರೆ­ಲ್ಲ ಹೊರಗೆ ಹೋದ ಸಂದರ್ಭ­ದಲ್ಲಿ ಕಳ್ಳ­ಕಾಕರಿಂದ ಮನೆಗೆ ರಕ್ಷಣೆ ನೀಡುವ ಸಾಧನ­ವೊಂ­ದನ್ನು ವಿದ್ಯಾರ್ಥಿಗಳು ತಯಾರಿ­ಸಿದ್ದಾರೆ.



ಶಾರ್ದುಲ್‌ ದಾತರ್‌,  ಹರ್ಷಲ್‌ ವೆಲಿಂಗ್‌, ಸನ್ನಿಲ್‌ ಪಾಟೀಲ್‌, ವೊಮ್‌ ವ್ಯಾಸ್‌, ಅಮೊದ್‌ ಪಂತ್‌ ಮತ್ತು ಶೌನಕ್‌ ಸಾವರ್‌ಗಾವಂಕರ್‌ ಅವರ­ನ್ನೊಳ­ಗೊಂಡ ವಿದ್ಯಾರ್ಥಿಗಳ ತಂಡ ತಯಾರಿಸಿರುವ ಈ ಯಂತ್ರದ ಹೆಸರು ‘ರೊಬೊ ನಂದಿ’.



‘ಮನೆಯವರು ಹೊರಗೆ ಹೋದ ಸಂದರ್ಭ­­­­ದಲ್ಲಿ ಮನೆಗೆ ಕನ್ನ ಹಾಕಲು ಕಳ್ಳರು ಬಂದಲ್ಲಿ ಈ ಸಾಧನ ತಕ್ಷಣ  ಮನೆಯೊಡೆಯನ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನಿಸುತ್ತದೆ’ ಎಂದು ಸಾಧನ ತಯಾರಿಸಿದ ವಿದ್ಯಾರ್ಥಿ­ಗಳ ತಂಡಕ್ಕೆ ಮಾರ್ಗದರ್ಶನ ನೀಡಿದ ಚಿಲ್ಡ್ರನ್‌ ಟೆಕ್‌ ಸೆಂಟರ್‌ನ ಉಪನ್ಯಾಸಕ  ಪುರುಷೋತ್ತಮ ಪಂಚಪಾಂಡೆ ಸುದ್ದಿ­ಗಾರರಿಗೆ ತಿಳಿಸಿದರು.



‘ಈ ರೀತಿ ಸಂದೇಶ ಬಂದ ನಂತರ ಆ ಮನೆಯೊಡೆಯ ನೆರವಿಗಾಗಿ ಪಕ್ಕದ ಮನೆ­­ಯವರಿಗೆ ವಿಷಯವನ್ನು ತಿಳಿಸಬ­ಹು­­ದಾಗಿದೆ’ ಎಂದು ಹೇಳಿದರು. ‘ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಆರು ವಿದ್ಯಾರ್ಥಿಗಳು ಈ ಸಾಧನ ತಯಾ­ರಿಸಿದ್ದು, ಈ ಸಾಧನ ಶೀಘ್ರ­ದಲ್ಲೆ ಮಾರುಕಟ್ಟೆಗೆ ಬರಲಿದೆ’ ಎಂದು  ಉಪ­ನ್ಯಾಸಕ ಪಂಚ­ಪಾಂಡೆ ನುಡಿದರು.

ಮನೆ ಭದ್ರತೆಗಾಗಿ ಬಹುತೇಕ ಗೃಹ ಸಂಘಗಳು ಮತ್ತು ಅಧಿಕಾರಿಗಳು ಸಿಸಿ­ಟಿವಿ ಕ್ಯಾಮೆರಾಗಳನ್ನು ಬಳಸು­ತ್ತಾರೆ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕಾಗು­ತ್ತದೆ ಮತ್ತು ಅದರಲ್ಲಿ ಸೆರೆಯಾಗಿರುವ ಚಿತ್ರಗಳನ್ನು ನಿರಂತರ­ವಾಗಿ ಗಮನಿಸುತ್ತಿ­ರ­ಬೇಕಾ­ಗುತ್ತದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.