ಸೋಮವಾರ, ಜನವರಿ 20, 2020
29 °C

ಮನ್ನಾಡೆಗೆ ನೃತ್ಯ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಭಿನಯ ಕಲಾವಿದರ ಕೇಂದ್ರದ ವತಿಯಿಂದ ಇದೇ ಭಾನುವಾರ (ಡಿ. 15) ಗಾಯಕ ಮನ್ನಾಡೆ ಸ್ಮರಣಾರ್ಥ ‘ಮನ್ನಾಡೆಗೆ ನೃತ್ಯ ನಮನ’  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ’ ಎಂದು ಕಾರ್ಯಕ್ರಮದ ಸಂಚಾಲಕ ಎ.ವಿ.ಸತ್ಯನಾರಾಯಣ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಗಾಯನ ಸಮಾ ಜದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳ 10ಕ್ಕೂ ಹೆಚ್ಚು ಕಲಾತಂಡಗಳು ಮನ್ನಾಡೆ ಅವರ ಹಾಡುಗಳಿಗೆ ನೃತ್ಯ ಮಾಡಲಿವೆ.

ಪ್ರತಿಕ್ರಿಯಿಸಿ (+)