ಗಿಲಾಟೋ ಅಂದಾಗ ಅರೆಕ್ಷಣ ನಾಲಗೆ ಚಪ್ಪರಿಸುವಂತಾಗುತ್ತೆ. ಇದು ಇಟಾಲಿಯನ್ ಐಸ್ಕ್ರೀಂ ನಮಗೆ ಮಾಡಲು ಬರುವುದಿಲ್ಲ ಎಂಬ ಕೊರಗು ಬೇರೆ. ಆದರೆ ಈ ಬಾರಿ ಮಮ್ಮಮಿಯಾ ಇಟಾಲಿಯನ್ ದೇಶದ ರುಚಿ ರುಚಿಯಾದ ಆಹಾರ ಪದಾರ್ಥಗಳನ್ನು ಕಲಿಯುವ ಅವಕಾಶ ನೀಡುತ್ತಿದೆ.

ಶೆಫ್ ನತಾಶಾ ಬಗೆಬಗೆಯ ಡಿಶಸ್ಗಳನ್ನು ಹೇಳಿಕೊಡುವುದರ ಜತೆಗೆ ಹಲವು ಟಿಪ್ಸ್ಗಳನ್ನೂ ಸಹ ತಿಳಿಸಲಿದ್ದಾರೆ. ಸಸ್ಯಾಹಾರದೊಂದಿಗೆ ಮಾಂಸಹಾರದ ಬಗ್ಗೆಯೂ ಇಲ್ಲಿ ತಿಳಿಸಿಕೊಡಲಿದ್ದಾರೆ. ಇಟಾಲಿಯನ್ ಶೈಲಿಯ ಆಹಾರಗಳನ್ನು ತಯಾರಿಸುವುದು ಹೇಗೆ?, ಅದನ್ನು ತಿನ್ನುವ ಬಗೆ ಹೇಗೆ ಎಂಬುದರ ಬಗ್ಗೆಯೂ ನತಾಶಾ ಹೇಳಿಕೊಡಲಿದ್ದಾರೆ. ಪಿಯರ್, ವಾಲ್ನೆಟ್, ಪಾರ್ಮೆಸನ್ ಸಲಾಡ್, ಟೊಮೆಟೋ ಮತ್ತು ಆಲಿವ್ ಬ್ರಸ್ಚೆಟ್, ಹ್ಯಾಂಡ್ಮೇಡ್ ನೋಚಿ, ಪಾಸ್ತಾ ಜತೆ ಟೊಮೆಟೋ ಮತ್ತು ಬೇಸಿಲ್ ಸಾಸ್, ಟಿರಮಿಸು ಡಿಶಸ್ ಸೇರಿದಂತೆ ಹಲವು ಬಗೆಯ ತಿಂಡಿ ಆಹಾರಗಳನ್ನು ತಯಾರಿಸುವ ಬಗೆಯನ್ನು ಹೇಳಿಕೊಡಲಾಗುತ್ತದೆ. ನತಾಶಾ ಶುಕ್ರವಾರ ಕೋರಮಂಗಲದಲ್ಲಿರುವ ಮಮ್ಮಮೀಯಾ ಮಳಿಗೆಯಲ್ಲಿ ವಿಶೇಷ ತರಬೇತಿ ನೀಡಲಿದ್ದಾರೆ.

ಕೇಕ್ ಅಂದರೆ ಎಲ್ಲರಿಗೂ ಪ್ರಿಯ. ಮಮ್ಮಮೀಯಾದಲ್ಲಿ ಈ ಬಾರಿ ನತಾಶಾ ಮೊಟ್ಟೆ ಬಳಸದೇ ಮಾಡುವ ಕಪ್ ಕೆಪ್ಗಳ ಬಗ್ಗೆ ಶನಿವಾರ ಸಂಜೆ 4ರಿಂದ 6ರವರೆಗೆ ಹೇಳಿಕೊಡಲಿದ್ದಾರೆ.
ಬ್ಲೂಬೆರ್ರಿ ಕಪ್ ಕೇಕ್, ಲೇಮನ್ ಕ್ರೀಂ ಚೀಸ್ ಕಪ್ ಕೇಕ್, ಆ್ಯಪಲ್ ಸಿನಾಮೋನ್ ಕಪ್ ಕೆಕ್ಗಳನ್ನು ಹೇಳಿಕೊಡಲಾಗುತ್ತದೆ. ಮಮ್ಮಾ ಮಿಯಾ, 11, ಜಕ್ಕಸಂದ್ರ ರಸ್ತೆ, 7ನೇ ಅಡ್ಡರಸ್ತೆ, ರಹೇಜಾ ರೆಸಿಡೆನ್ಸಿ ಹತ್ತಿರ, ಕೋರಮಂಗಲ. ನೋಂದಣಿ ಮಾಹಿತಿಗೆ: 9379416395.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.