ಮಂಗಳವಾರ, ಮೇ 11, 2021
27 °C

ಮರಳು ಅಕ್ರಮ ಸಾಗಣೆ: 4 ಟ್ರಾಕ್ಟರ್, 5 ಕೊಪ್ಪರಿಕೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ಇಲ್ಲಿಗೆ ಸಮೀಪದ ತೊರೆಚಾಕನಹಳ್ಳಿ ಮತ್ತು ಆಗ್ರಹಳ್ಳಿ ಗ್ರಾಮ ಸಮೀಪ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದ ನಾಲ್ಕು ಟ್ರಾಕ್ಟರ್ ಹಾಗೂ ಐದು ಕೊಪ್ಪರಿಕೆಗಳನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರಸ್ವಾಮಿ ಮತ್ತು ಇನ್ಸ್‌ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿಯೇ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ಕು ಲೋಡ್ ಮರಳು ವಶಕ್ಕೆ ಪಡೆದರು.ತೊರೆಬೊಮ್ಮನಹಳ್ಳಿ ಬಳಿ ನಡೆದಿದ್ದ ದಾಳಿಯಲ್ಲಿ ಸಂಗ್ರಹಿಸಿದ್ದ 25 ಲೋಡ್ ಮರಳು ಹಾಗೂ ಮಂಗಳವಾರದ ದಾಳಿಯಲ್ಲಿ ಪಡೆದ ಮರಳು ಸೇರಿ 1.61 ಲಕ್ಷ ರೂಪಾಯಿಗೆ ಹರಾಜು ಹಾಕಲಾಯಿತು. ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.