ಭಾನುವಾರ, ಜನವರಿ 19, 2020
20 °C

ಮರುಭೂಮಿಯಲ್ಲಿ ನೀರಿನ ಒರತೆ

–ಆರ್.ಶಿವರಾಮ,ಸಂಡೂರು Updated:

ಅಕ್ಷರ ಗಾತ್ರ : | |

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಭಾರತದ ಚುನಾವಣೆ­ಗಳು ಹೊಸದಿಕ್ಕಿನತ್ತ ಹೊರಳುತ್ತಿರುವುದರ ಮುನ್ಸೂಚನೆ. ಈ ಸಾಧನೆಯು ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಬೇಕು ಎನ್ನುವ ಜನರಿಗೆ ಮರುಭೂಮಿ­ಯಲ್ಲಿ ಓಯಸಿಸ್‌ನಂತೆ ಕಾಣುತ್ತಿದೆ.ಚುನಾವಣೆ ಎಂದರೆ ಹಣ, ಹೆಂಡ, ಆಮಿಷ­ಗಳ ಮೇಲಾಟವಾಗಿತ್ತು. ಆ ದಿನಗಳು ದೂರ­ವಾಗ­ಲಿವೆ ಎನ್ನುವ ಸುಳಿವನ್ನು ದೆಹಲಿ ಮತ­ದಾರರು ನೀಡಿದ್ದಾರೆ.  ಕೆಲವೇ ಜನರ ಕೈಯಲ್ಲಿ ಅಪಾರವಾದ ಸಂಪತ್ತು ಮತ್ತು ಅಧಿ­ಕಾರದ ನೆಲೆಗಳು ಸಿಕ್ಕಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿರುವ ಸಮಯದಲ್ಲಿ ಮತದಾರರು ದಿಟ್ಟ ತೀರ್ಪು ಕೊಟ್ಟಿದ್ದಾರೆ.  ಆಮ್ ಆದ್ಮಿಗಳ ಬಳಗ ದೊಡ್ಡದಾಗಲಿ.

 

ಪ್ರತಿಕ್ರಿಯಿಸಿ (+)