ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಂಕೇಶ್ವರ ಗಡಿ ಭಾಗದಲ್ಲಿದ್ದುಕೊಂಡು ಸಾಹಿತ್ಯ, ನಾಟಕ, ಕಾದಂಬರಿ, ಪಠ್ಯಪುಸ್ತಕ. ಅನುವಾದ ಮುಂತಾದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರಾ.ಕ. ನಾಯಕ ಅವರು ಈಗ ನಮ್ಮಂದಿಗಿಲ್ಲ.

ಮೂಲತ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟದಲ್ಲಿ 1936 ರಲ್ಲಿ ಜನಿಸಿದ ಅವರು ಸಂಕೇಶ್ವರದ ಎಸ್.ಡಿ. ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಅನಂತರ ಪದವಿ ಹಾಗೂ ಸ್ನಾತ್ತಕೊತ್ತರ ಪದವಿ ಪಡೆದರು. ನಂತರ ತಾವು ಕಲಿತ ಸಂಕೇಶ್ವರದ ಎಸ್.ಡಿ. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ ತಮ್ಮ ವಿನೂತನ ಶೈಲಿಯಿಂದ ವಿದ್ಯಾರ್ಥಿಗಳ ಮನ ಗೆದಿದ್ದರು.

ಹೀಗೆ ಪಾಠ-ಪ್ರವಚನ ಮಾಡುತ್ತಲೆ ಸಾಹಿತ್ಯ, ನಾಟಕ ರಚನೆಗಳಿಗೂ ಕೈಹಾಕಿದರು. ನವರಾತ್ರಿ, ಬಾಗಿಲು, ಸಂತಾನ, ಪ್ರಭಾವತಿ, ಹೆಸರು ಹೇಳು, ಕಿಡಕಿ, ರೈತ, ಭೂಕೈಲಾಸ ನಾಟಕಗಳನ್ನು ರಚಿಸಿ ಆಡಿಸಿದವರು. ಆಲ, ಬೆಂಗಾಡ ಕಾದಂಬರಿ ಬರೆದಿದ್ದರು. ಒಡಿಸ್ಸಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಪ್ರಾರಂಭದಲ್ಲಿ ಗಡಿನಾಡು ಎಂಬ ಪತ್ರಿಕೆಯನ್ನು ಆರಂಭಿಸಿ, ಗಡಿ ಭಾಗದಲ್ಲಿ ಪ್ರಜ್ಞೆ ಮೂಡಿಸಿದರು. ಇದಲ್ಲದೆ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಸರಳ ಶೈಲಿಯಲ್ಲಿ ಪುಸ್ತಕಗಳನ್ನು ರಚಿಸುವ ಕೆಲಸ ಮಾಡಿದ್ದರು.

ಅವರ ಸಾಧನೆಯನ್ನು ಮನಗಂಡು ಕರ್ನಾಟಕ ನಾಟಕ ಅಕಾಡೆಮಿ, ಮೈಸೂರು ರಾಮಕೃಷ್ಣ ಆಶ್ರಮ, ಸುತ್ತೂರು ಮಠ, ಮುಂಬೈ ಕನ್ನಡ ಬಳಗಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಇತ್ತೀಚೆಗೆ ಸಂಕೇಶ್ವರದಲ್ಲಿ ಜರುಗಿದ ಹುಕ್ಕೇರಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಬಂದು ಪ್ರಬಂಧ ಮಂಡಿಸಿದ್ದರು. ಬೆಳಗಾವಿಯಲ್ಲಿಯೇ ನೆಲಿಸಿದ್ದ ಅವರು, ಸಂಕೇಶ್ವರ ಭಾಗದವರ್ಯಾರಾದರೂ ಆಕಸ್ಮಿಕವಾಗಿ ಭೆಟ್ಟಿಯಾದರೆ, ಬಹಳ ದಿನಗಳ ನಂತರ ನಿಮ್ಮನ್ನು ಭೆಟ್ಟಿಯಾಗುತ್ತಿದ್ದೇನೆ ಸರ್ ಎಂದರೆ, ಬಹಳ ದಿನಗಳಲ್ಲ, ಬಹಳ ವರ್ಷಗಳೇ ಆಯಿತು ಎಂದು ಮಾತಿನ ಚಟಾಕಿ ಹಾರಿಸುತಿದ್ದರು. ತಮ್ಮ ಬದುಕಿನುದ್ದಕ್ಕೂ ಪ್ರಚಾರದಿಂದ ಬಹು ದೂರ ಉಳಿದಿದ್ದ ಅವರು ಸೆಪ್ಟೆಂಬರ್ 27 ರಂದು ತಮ್ಮ ಬದುಕಿಗೆ ವಿದಾಯ ಹೇಳಿದ್ದು ಬಹು ಜನರಿಗೆ ಗೊತ್ತಾಗಲೇ ಇಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.