ಬುಧವಾರ, ಮಾರ್ಚ್ 3, 2021
28 °C

ಮಲಾಲಾ, ಕ್ರಿಕೆಟಿಗ ಮಿಸ್ಬಾಗೆ ಪಾಕಿಸ್ತಾನ ನಾಗರಿಕ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಾಲಾ, ಕ್ರಿಕೆಟಿಗ ಮಿಸ್ಬಾಗೆ ಪಾಕಿಸ್ತಾನ ನಾಗರಿಕ ಪ್ರಶಸ್ತಿ

ಇಸ್ಲಾಮಾಬಾದ್‌ (ಪಿಟಿಐ): ಪಾಕಿ­ಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟ­ಗಾರ್ತಿ ಮಲಾಲಾ ಯೂಸೂಫ್‌­­ಝೈ ಮತ್ತು ಪಾಕ್‌  ಕ್ರಿಕೆಟ್‌ ತಂಡದ ನಾಯಕ ಮಿಸ್ಬಾ ಉಲ್‌­ಹಕ್‌ ಸೇರಿದಂತೆ 105 ಜನರಿಗೆ ಪಾಕಿಸ್ತಾನ ಸರ್ಕಾರ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಅಧ್ಯಕ್ಷ ಮಮ್ನೂನ್‌ ಹುಸೇನ್‌ ಕಳೆದ ವರ್ಷ ಆಗಸ್ಟ್‌ 14ರಂದೇ 105 ಜನರಿಗೆ ನಾಗ­ರಿಕ ಪ್ರಶಸ್ತಿ ನೀಡುವುದಕ್ಕೆ ಒಪ್ಪಿಗೆ ಸೂಚಿ­ಸಿದ್ದರು.



ವಿಶೇಷ ಪ್ರಕರಣಗಳಲ್ಲಿ ಇನ್ನೂ 10 ಪ್ರಶಸ್ತಿಗಳನ್ನು ನೀಡಲಾ­ಗುತ್ತದೆ. ಭಾನುವಾರ ಐವಾನೆ ಸಾದ್ರದಲ್ಲಿ ನಡೆ­ಯುವ ಸಮಾರಂಭದಲ್ಲಿ ಮಮ್ನೂನ್‌ ಹುಸೇನ್‌ ಅವರು ಐವರು ವಿದೇಶಿ­ಯರೂ ಸೇರಿದಂತೆ 39 ಜನರಿಗೆ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಲಂಡನ್‌ನಲ್ಲಿನ ಪಾಕಿಸ್ತಾನದ ನಿಯೋ­ಗದ ಮೂಲಕ ಮಲಾಲಾಗೆ ಪ್ರಶಸ್ತಿ­ಯನ್ನು ನೀಡುವುದು ಎಂದು ಅಧಿ­ಕಾರಿ­ಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.