ಶುಕ್ರವಾರ, ಜನವರಿ 24, 2020
22 °C

ಮಲೆನಾಡಿನಲ್ಲಿ ಕೃಷಿ ತೋಟಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ ಜಿಲ್ಲೆಗೆ ಸರ್ಕಾರವು ಇತ್ತೀಚಿಗೆ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿದೆ. ಆದರೆ ಈ ವಿಶ್ವವಿದ್ಯಾಲಯ ಬರೀ ಕೃಷಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತಿದೆ. ಕೆಲವು ರಾಜಕಾರಣಿಗಳೂ ಈ ಬಗ್ಗೆಯೇ ಒಲವು ತೋರುತ್ತಿದ್ದಾರೆ.ಈ ವಿವಿ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ಪ್ರಧಾನವಾಗಿದ್ದು (ಶೇ 60 ಕ್ಕೂ ಹೆಚ್ಚು), ಕೃಷಿ ಕ್ಷೇತ್ರ ಕೇವಲ ಶೇ12-15 ರಷ್ಟು ಮಾತ್ರ ಇದೆ.

 

ಬಂಜರು ನೆಲ ಮತ್ತು ಅರಣ್ಯ ಬೆಳೆಗಳು ಶೇ. 25 ರಷ್ಟಿವೆ. ಹೀಗಿರುವಾಗ ಬರೀ ಕೃಷಿಗೆ ಸಂಬಂಧಪಟ್ಟಂತೆ  ವಿಶ್ವವಿದ್ಯಾಲಯ ಮಾಡ ಹೊರಟಿರುವುದು ಸೂಕ್ತವಲ್ಲ.

ಆದ್ದರಿಂದ ಶಿವಮೊಗ್ಗ ವಿಶ್ವವಿದ್ಯಾಲಯವನ್ನು ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯವೆಂದು ಮಾಡಿ, ಒಂದೇ ಜಾಗದಲ್ಲಿ ಎಲ್ಲಾ ಮಾಹಿತಿಗಳು ಲಭ್ಯವಾಗಲು ಚಿಂತನೆ ಮಾಡಲಿ.

  

ಪ್ರತಿಕ್ರಿಯಿಸಿ (+)