ಸೋಮವಾರ, ಮೇ 23, 2022
21 °C

ಮಲೆಮಹದೇಶ್ವರ ಬೆಟ್ಟ: ಕನ್ನಡ ತೇರಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆಗೊಂಡು ಹನೂ ರಿಗೆ ಆಗಮಿಸಿದ ಜಿಲ್ಲೆಯ ಐತಿ ಹಾಸಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ ಬಿಂಬಿಸುವ ವಿಶ್ವ ಕನ್ನಡ ತೇರನ್ನು ಭಾನುವಾರ ಸಂಜೆ ಅದ್ಧೂರಿಯಿಂದ ಸ್ವಾಗತಿಸಲಾಯಿತು.ತಾಲ್ಲೂಕಿನ ಕೌದಳ್ಳಿ, ಕೆಂಪಯ್ಯನ ಹಟ್ಟಿ, ರಾಮಾಪುರ, ಅಜ್ಜೀಪುರ ಮಾರ್ಗವಾಗಿ ಬಂದ ತೇರನ್ನು ಹನೂರು ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಪಟ್ಟಣ ಪಂಚಾಯಿತಿ ವತಿಯಿಂದ ಕೂರ್ಣಕುಂಭ ಸ್ವಾಗತದೊಡನೆ ಕರಡಿ ಮಜಲು, ಪೂಜಾಕುಣಿತ ಮಂಗಳವಾದ್ಯ ಸಮೇತ ಬರಮಾಡಿಕೊಂಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಾರ ಕನ್ನಡಾಭಿಮಾನಿಗಳ ಜೊತೆಗೂಡಿ ತೇರು ಸಂಚರಿಸಿ ಪಟ್ಟಣದ ಗಡಿ ಭಾಗದಲ್ಲಿರುವ ಆಗ್ನಿಶಾಮಕ ದಳ ಕಚೇರಿಯ ಬಳಿ ತೇರನ್ನು ಬೀಳ್ಕೊಡಲಾಯಿತು.ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಮ್ಮ, ಉಪಾಧ್ಯಕ್ಷೆ ಮಾದೇಶ, ಸದಸ್ಯ ಮುದ್ದಗಾಮಶೆಟ್ಟಿ, ಪೂರ್ಣಿ ಮಾರಾಜುಗೌಡ, ಸಿದ್ದರಾಜು, ಶೋಭ ಮಹದೇವ್, ವಿಶೇಷ ತಹಶೀಲ್ದಾರ್ ರಂಗ ಸ್ವಾಮಯ್ಯ, ಉಪ ತಹಶೀಲ್ದಾರ್ ರಂಗ ಸ್ವಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್,ಬಿ ಆರ್‌ಪಿ ರಾಮಶೆಟ್ಟಿ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಲಿಂಗೇ ಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಚಯ್ಯ, ಚೇತನ್‌ಕುಮಾರ್, ಬಸವಣ್ಣ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಮಹಾಲಿಂಗಯ್ಯ, ಮುಖಂಡ ರಾಜಶೇಖರ್‌ಮೂರ್ತಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.ತೇರು ಸಂಚರಿಸುವ ಮಾರ್ಗದಲ್ಲಿ ತಳಿರುತೋರಣ ಗಳಿಂದ ಅಲಂಕೃತ ಗೊಳಿಸಿ ಹನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾತ್ರೆಯ ಸಂಭ್ರಮ ನಿರ್ಮಾಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.