ಮಂಗಳವಾರ, ಮೇ 11, 2021
26 °C

ಮಲೇಷ್ಯಾದಲ್ಲಿ ಬಯೊಕಾನ್ ಔಷಧಿ ತಯಾರಿಕಾ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೊಕಾನ್, ಮಲೇಷ್ಯಾದ ಜೈವಿಕ ತಂತ್ರಜ್ಞಾನ ಪಾರ್ಕ್ `ಬೈಯೊ-ಎಕ್ಸ್ ಸೆಲ್~ನಲ್ಲಿ ಸ್ಥಾಪಿಸಲಿರುವ ಜೈವಿಕ ಔಷಧ ತಯಾರಿಕಾ ಘಟಕ ಮತ್ತು ಸಂಶೋಧನಾ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಲಾಗಿದೆ.



ಮಲೇಷ್ಯಾದ ಜೋಹೋರ್ ರಾಜ್ಯದ ಮುಖ್ಯಮಂತ್ರಿ  ಹಾಜಿ ಅಬ್ದುಲ್ ಘನಿ ಬಿನ್ ಓಥ್ಮನ್ ಅವರು ಈ ಘಟಕದ ಕಾರ್ಯಾರಂಭದ   ಸ್ಮರಣಾರ್ಥ ಫಲಕ  ಅನಾವರಣಗೊಳಿಸಿದರು.  ಜೈವಿಕ ತಂತ್ರಜ್ಞಾನ ಪಾರ್ಕ್‌ನಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಔಷಧಿ ತಯಾರಿಕಾ ಘಟಕದ ಮೊದಲ ಹಂತದ ಯೋಜನೆಗೆ ಬಯೊಕಾನ್, 161 ದಶಲಕ್ಷ ಡಾಲರ್‌ಗಳಷ್ಟು ಬಂಡವಾಳ ( ್ಙ 720 ಕೋಟಿ) ಹೂಡಿಕೆ ಮಾಡಲಿದೆ. ಈ ಘಟಕವು 2014 ರ ವೇಳೆಗೆ ಕಾರ್ಯಾರಂಭ ಮಾಡಲಿದೆ. 



ಮಧುಮೇಹ ಚಿಕಿತ್ಸೆಗೆ ಬಳಸುವ  ಬಯೊಕಾನ್‌ನ ಬಯೊಸಿಮಿಲರ್ ಇನ್ಸುಲಿನ್‌ನ ಜಾಗತಿಕ ಬೇಡಿಕೆಗಳನ್ನು ಈ ಘಟಕ ಪೂರೈಸಲಿದೆ ಎಂದು ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.