ಸೋಮವಾರ, ಮೇ 10, 2021
27 °C

ಮಳೆಗಾಗಿ ಮಕ್ಕಳು ಅರೆಬೆತ್ತಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಗ್ರಾಮೀಣ ಭಾಗದಲ್ಲಿ ಮಳೆ ಬಾರದಿದ್ದಾಗ ಮಳೆರಾಯನಿಗಾಗಿ ಪ್ರಾರ್ಥಿಸಿ ವಿಶೇಷ ಹೋಮ ಹವನ, ಕುಂಬಾಭಿಷೇಕ, ಕತ್ತೆ, ಕಪ್ಪೆಗಳ ಮದುವೆ ಸಾಮಾನ್ಯ. ಆದರೆ ತಾಲ್ಲೂಕಿನ ನಾಯಿಂದ್ರಹಳ್ಳಿಕಾಲೊನಿಯಲ್ಲಿ ಮಂಗಳವಾರ ಸಂಜೆ ಮಕ್ಕಳು ಅರೆಬೆತ್ತಲೆ ಮೆರವಣಿಗೆ ನಡೆಸಿದರು.ಅರೆ ಬೆತ್ತಲೆಯಾಗಿ ತಲೆ ಮೇಲೆ ಮಳೆರಾಯನನ್ನು ಹೊತ್ತುಕೊಂಡು ಹೊಯ್ಯೋ ಹೊಯ್ಯೋ ಮಳೆರಾಯ ಎಂದು ಹಾಡುತ್ತಾ ಕಾಲೊನಿಯಲ್ಲಿ ಮೆರವಣಿಗೆ ನಡೆಸಿದರು.ಇತ್ತೀಚೆಗೆ ಮಳೆಗಾಗಿ ಅನೇಕ ಗ್ರಾಮದಲ್ಲಿ ಇಂತಹ ವಿಶಿಷ್ಟ ಸಂಪ್ರದಾಯದಿಂದ ಪ್ರಾರ್ಥನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಮಳೆ ಈ ವರ್ಷ ಕೈಕೊಟ್ಟಿದ್ದು ಜನರು ದಿನವೂ ಆಕಾಶದ ಕಡೆಗೆ ನೋಡಿ ಮಳೆಗಾಗಿ ಪ್ರಾರ್ಥಿಸುವುದು ಮೇಲಿಂದ ಮೇಲೆ ನಡೆಯುತ್ತಿದೆ.ಕೆಲವು ಕಡೆ ಇನ್ನೂ ಬಿತ್ತನೆ ಸಹ ಆಗಿಲ್ಲ. ಬಿತ್ತನೆಯಾಗಿರುವುದು ಮೊಳಕೆಯೂ ಆಗಿಲ್ಲ. ಕೆಲವಡೆ ಮೊಳಕೆಯೊಡೆದ ಬೆಳೆ ಈಗ ಒಣಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.