ಮಳೆರಾಯ

7

ಮಳೆರಾಯ

Published:
Updated:
ಮಳೆರಾಯ

ಪಳಪಳಿಸುತ ಮಿಂಚಲು

ತಕ್ಷಣವೇ ಆಯಿತು ಕತ್ತಲು

ಸುತ್ತಲೂ ಮೇಘರಾಜನ ಆರ್ಭಟ

ಬಿದ್ದನು ವರುಣ ಪಟಪಟ

ಮಳೆರಾಯನ ಹಾರಾಟ

ಮರೆಮಾಚಿತು ಕಂದಮ್ಮನ ಕೂಗಾಟ

ಮತ್ತಷ್ಟು ಜೋರು ಮಳೆ

ಹೆಚ್ಚಿಸಿತ್ತು ಇಳೆಯ ಕಳೆ

ಮನೆಯಲ್ಲಿ ಮಾಯವಾಯಿತು ಬೆಳಕು

ದೀಪ ಬೆಳಗಲು ಸರಿಯಿತು ಮುಸುಕು

ಅಡಿಗೆಯಾಯಿತು ಘಮಘಮ

ಮಳೆಯು ಮಾತ್ರ ನಿಲ್ಲಿಸಲಿಲ್ಲ ಸರಿಗಮ

ಹಾಕಿದಳು ಹಿಡಿಶಾಪ ಮಳೆಗೆ

ಆದರೆ, ಇದು ಬಿಂಬಿಸಿತ್ತು ಬೆಸುಗೆ

ಮಾರನೇ ದಿನ, ಕೆರೆ-ಕಟ್ಟೆಯಲೆಲ್ಲ ನೀರು ಹೊಲ-ಗದ್ದೆಗಳಲ್ಲಿ ಹಚ್ಚ-ಹಸಿರು-ನಂದೀಶ್ ವೈ.ಆರ್.

9ನೇ ತರಗತಿ, ಆದರ್ಶ ವಿದ್ಯಾಲಯ,

ಯಳಂದೂರು, ಚಾಮರಾಜನಗರ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry