ಕೊಪ್ಪಳ: ಮುಂಗಾರು ಮಳೆ ತೀವ್ರ ಹಿನ್ನಡೆ ಕಂಡಿದ್ದರಿಂದ ಬೆಳೆ ಹಾಳಾಗುವ ಆತಂಕಕ್ಕೊಳಗಾದ ರೈತರು ತಾವೇ ಸಸಿಗಳನ್ನು ಕಿತ್ತು ಹೊಲ ಹರಗುತ್ತಿದ್ದಾರೆ.

ತಾಲ್ಲೂಕಿನ ಬೆಟಗೇರಿ, ತಿಗರಿ, ಹನಕುಂಟಿ ಸೀಮೆಯ ನೂರಾರು ರೈತರು ಬೆಳೆ ನಾಶಪಡಿಸಿ ಬೇರೆ ಬೆಳೆ ಬಿತ್ತನೆಗೆ ಹೊಲ ಸಜ್ಜುಗೊಳಿಸುತ್ತಿದ್ದಾರೆ. ಇವರೆಲ್ಲಾ ತುಂಗಭದ್ರಾ ಅಣೆಕಟ್ಟೆಯ ಹಿನ್ನೀರು ಪ್ರದೇಶದ ರೈತರು. ನದಿ ದಡದಲ್ಲಿದ್ದರೂ ಇವರಿಗೆ ಬೆಳೆಗಳಿಗೆ ನೀರುಣಿಸಲಾಗದ ಅಸಹಾಯಕತೆ. ಸಾಲದ್ದಕ್ಕೆ ಈ ಬಾರಿ ಜಲಾಶಯವೂ ಭರ್ತಿಯಾಗಿಲ್ಲ.

ಬೆಟಗೇರಿ ಭಾಗದಲ್ಲಿ ಮೆಕ್ಕೆಜೋಳದ ಸಸಿಗಳನ್ನು ಕಿತ್ತು ಹಾಕುತ್ತಿದ್ದಾರೆ. ಇವು ಬಿತ್ತನೆಯಾಗಿ ಸುಮಾರು 2 ತಿಂಗಳು ಕಳೆದಿವೆ. ತಿಗರಿ ಭಾಗದಲ್ಲಿ ಹೆಸರು ಬೆಳೆಗಳನ್ನು ಕಿತ್ತು ಹಾಕುತ್ತಿದ್ದಾರೆ. ಹೆಸರು ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡಿರುವುದು ಬೆಳೆ ಕಿತ್ತು ಹಾಕಲು ಕಾರಣ ಎಂದು ರೈತ ನೀಲಪ್ಪ ಗುಡದಣ್ಣನವರ ಹೇಳಿದರು.

‘ರೋಹಿಣಿ ಮಳೆ ಬಂದಾಗ ಬಿತ್ತನೆ ಮಾಡಿದ್ದೆವು. ಈ ಬಾರಿ ಮಳೆ ತೀವ್ರ ಹಿನ್ನಡೆಯಾಗಿದೆ. ಅರ್ಧದಷ್ಟು ಬೆಳೆದ ಸಸಿಗಳು ಮುಂದೆ ಫಸಲು ಕೊಡುವ ನಿರೀಕ್ಷೆ ಇಲ್ಲ. ಇವುಗಳನ್ನು ಕಿತ್ತರೆ ಕೊನೇ ಪಕ್ಷ ದನಕರುಗಳಿಗೆ ಮೇವಾದರೂ ಆಗುತ್ತದೆ. ಮುಂದೆ ಸ್ವಲ್ಪವಾದರೂ ಮಳೆಯಾದರೆ ಸೂರ್ಯಕಾಂತಿ, ಬಿಳಿಜೋಳ ಹಾಗೂ ಸಜ್ಜೆ ಬಿತ್ತಬೇಕೆಂದಿದ್ದೇನೆ’ ಎಂದು ನೀಲಪ್ಪ ಹೇಳಿದರು.

ರಾಯಚೂರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಅವರು ಹೇಳುವಂತೆ, ‘ಕೊಪ್ಪಳ ತಾಲ್ಲೂಕಿನ ಭಾಗದಲ್ಲೇ ಬೆಳೆ ಕಿತ್ತು ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇದು ಸರಿಯಲ್ಲ. ರೈತರಿಗೆ ಏನೂ ಹೇಳಲಾಗದ ಪರಿಸ್ಥಿತಿಯಿದೆ.

ಒಂದು ಬೆಳೆಯನ್ನು ಕಿತ್ತು ಹಾಕಿ ಇನ್ನೊಂದು ದೀರ್ಘಾವಧಿ ಬೆಳೆ ಬೆಳೆಯಲು ಮುಂದಾಗುತ್ತಾರೆ. ಸಹಜವಾಗಿ ವೆಚ್ಚ ಹೆಚ್ಚಳವಾಗುತ್ತದೆ. ಸೆಪ್ಟೆಂಬರ್ನಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಆ ವೇಳೆಗಾದರೂ ಫಸಲು ಪಡೆಯುವ ಪ್ರಯತ್ನಕ್ಕೆ ರೈತರು ಮುಂದಾಗಿದ್ದಾರೆ’ ಎಂದರು.

ಜುಲೈ, ಆಗಸ್ಟ್ನಲ್ಲಿ ಕೈಕೊಟ್ಟ ಮಳೆ: ‘ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚೇ ಸುರಿದಿದೆ. ಆದರೆ, ಅದು ಏಕಪ್ರಕಾರವಾಗಿಲ್ಲ. ಜನವರಿಯಿಂದ ಆ. 16ರ ವರೆಗೆ 271 ಮಿ.ಮೀ. ಮಳೆ ವಾಡಿಕೆ ಪ್ರಕಾರ ಸುರಿಯಬೇಕಿತ್ತು. 275 ಮಿ.ಮೀ. ಸುರಿದಿದೆ. ಆದರೆ, ಮಳೆ ಹೆಚ್ಚು ಸುರಿದಿರುವುದು ಮೇ ಅಂತ್ಯ ಹಾಗೂ ಜೂನ್ನಲ್ಲಿ ಮಾತ್ರ. ಜೂನ್ನಲ್ಲಿ 78.8 ಮಿ.ಮೀ. ವಾಡಿಕೆ ಮಳೆಯಾಗುತ್ತದೆ.

ಈ ಬಾರಿ 129 ಮಿ.ಮೀ. ಸುರಿದಿದೆ. ಜುಲೈನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಆಗಸ್ಟ್ನಲ್ಲಿ 44.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 14.8 ಮಿ.ಮೀ. ಮಳೆಯಾಗಿದೆ. ಶೇ 67ರಷ್ಟು ಮಳೆ ಹಿನ್ನಡೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಸುರಿದ ಮಳೆಯೂ ಚದುರಿದಂತೆ ಬಿದ್ದಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

ಈ ಬೆಳೆಯ ಆಸೆ ಬಿಟ್ಟಿದ್ದೇವೆ. ಮುಂದೆ ಮಳೆಯಾದರೆ ಹೊಸದಾಗಿ ಬಿತ್ತಿದ ಬೆಳೆಯ ಫಸಲು ಬಂದೀತು ಎಂಬ ಆಸೆಯಿದೆ
-ನೀಲಪ್ಪ ಗುಡದಣ್ಣನವರ,
ಬೆಟಗೇರಿ ರೈತ

ಮುಖ್ಯಾಂಶಗಳು
*ಮಳೆ ಹಿನ್ನಡೆ, ರೋಗ ಬಾಧೆಯ ಆತಂಕ
*ಕೊಪ್ಪಳ, ಯಲಬುರ್ಗಾ ಭಾಗಗಳಲ್ಲಿ ಸಸಿ ಕೀಳುತ್ತಿರುವ ರೈತರು
*ಮೆಕ್ಕೆಜೋಳ, ಹೆಸರು ಬೆಳೆ ನಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.