ಕಾರವಾರ: `ನಮ್ಮ ಭಾಷೆ, ನೆಲ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಭಿರುಚಿ, ಅಭಿಮಾನವನ್ನು ಉಳಿಸಿ ಬೆಳೆಸಬೇಕು~ ಎಂದು ಜಿಲ್ಲಾಧಿಕಾರಿ ಇಂಕೋಂಗ್ಲಾ ಜಮೀರ್ ಸಲಹೆ ನೀಡಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

`ಯುವ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರೀತಿಸಲು ಪ್ರೇರೇಪಿಸಬೇಕಾಗಿದೆ. ಅವರಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಕೆಲಸಗಳು ನಡೆಯಬೇಕಾಗಿದೆ. ಕನ್ನಡಿಗರೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆಯನ್ನು ಉಳಿಸುವ, ಕರ್ನಾಟಕ ರಾಜ್ಯದ ಅಖಂಡತೆಯನ್ನು ರಕ್ಷಿಸುವ ಪಣತೊಟ್ಟಾಗ ಈ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ~ ಎಂದರು.

`ಏಕೀಕರಣಗೊಂಡ ನಂತರ ಕರ್ನಾಟಕ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ ಕರ್ನಾಟಕದಲ್ಲಿ ಇವತ್ತು ಕನ್ನಡ ಭಾಷೆ, ಸಂಸ್ಕೃತಿ ಸಾಕಷ್ಟು ತೊಂದರೆ, ಅಪಾಯಗಳನ್ನು ಎದುರಿಸುತ್ತಿದೆ. ಭಾಷೆಯ ಅಭಿವೃದ್ಧಿಗೆ, ಸಂಸ್ಕೃತಿ-ಸಾಹಿತ್ಯದ ರಕ್ಷಣೆಗೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಕನ್ನಡಿಗರೆಲ್ಲರ ಪ್ರಾಮಾಣಿಕ ಕಳಕಳಿ, ಪ್ರಯತ್ನವೂ ಅಷ್ಟೇ ಅಗತ್ಯ~ ಎಂದು ಹೇಳಿದರು.

`ಕನ್ನಡಿಗರು ಉದಾರಿಗಳು. ಮುಕ್ತ ಮನಸ್ಸಿನಿಂದ ಬೇರೆ ರಾಜ್ಯ ಮತ್ತು ಭಾಷೆಗಳ ಜನರು ಕರ್ನಾಟಕಕ್ಕೆ ಬಂದಾಗ ಸಹಬಾಳ್ವೆ ನಡೆಸಲು ಸಹಕಾರ ನೀಡುವ ಮನೋಭಾವದವರು. ಇದು ನನ್ನ ವೈಯಕ್ತಿಕ ಅನುಭವ ಕೂಡ. ಏಕೆಂದರೆ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ಮೂಲತಃ ನಾಗಾಲ್ಯಾಂಡ್ ರಾಜ್ಯದವಳು. ಆದರೆ ನಾನು ಇಲ್ಲಿ ನನ್ನದೇ ಊರಿನಲ್ಲಿ ಇರುವ ಹಾಗೆ ಸದಾ ನೆಮ್ಮದಿಯಿಂದ ನಿರಾಳವಾಗಿದ್ದೇನೆ.

ಹೊರಗಿನವರನ್ನು ತುಂಬಾ ಕಾಳಜಿ ಮತ್ತು ಸ್ನೇಹ ಭಾವದಿಂದ ನೋಡಿಕೊಳ್ಳುವ ಈ ನಾಡಿನ ಮತ್ತು ಇಲ್ಲಿನ ಜನರ ಗುಣವೇ ಇದಕ್ಕೆ ಕಾರಣ~ ಎಂದು ಕೊಂಡಾಡಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ರಾಜ್ಯೋತ್ಸವದ ಅಂಗವಾಗಿ ಪರೇಡ್ ಮೈದಾನದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಟಿಬೆಟಿಯನ್ ಕಲಾವಿದರ ಯಾಕ್ ಅಂಡ್ ಲಯನ್ ಡ್ಯಾನ್ಸ್, ಸುಗ್ಗಿ ಕುಣಿತ, ಡೊಳ್ಳು ಕುಣಿತ ಮತ್ತು ವಾದ್ಯ ಮೆಚ್ಚುಗೆಗೆ ಪಾತ್ರವಾದವು. ಪೊಲೀಸ್, ಎನ್ಸಿಸಿ, ಗೃಹರಕ್ಷಕದಳ ಸೇರಿದಂತೆ ಒಂಬತ್ತು ತುಕಡಿಗಳ ಪಥಸಂಚಲನ ಆಕರ್ಷಕವಾಗಿತ್ತು. ಬಾಲಮಂದಿರ ಪ್ರೌಢಶಾಲೆಯ ಮಕ್ಕಳು ನಾಡಗೀತೆ ಮತ್ತು ರೈತಗೀತೆ ಹಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಗುಡಿಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ, ಉಪ ವಿಭಾಗಾಧಿಕಾರಿ ಪುಷ್ಪಲತಾ, ನಗರಸಭೆ ಆಯುಕ್ತ ಡಾ. ಉದಯಕುಮಾರ ಶೆಟ್ಟಿ, ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್ ಸೇರಿದಂತೆ ಗಣ್ಯರು ಹಾಜರಿದ್ದರು.

ಮೆರವಣಿಗೆಗೆ ಚಾಲನೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಜಮೀರ್ ಅವರು ಡಿಸಿ ಕಚೇರಿ ಆವರಣದಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
ಸ್ತಬ್ಧಚಿತ್ರ: ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು. ನಗರಸಭೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

ಮನ ಸೆಳೆದ ಮೆರವಣಿಗೆ
ದಾಂಡೇಲಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರಾಡಳಿತ ಹಾಗೂ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಕನ್ನಡಾಂಬೆಯ ಮೆರವಣಿಗೆ ಹಾಗೂ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ಮಳೆಯ ನಡುವೆಯೂ ಮನ ಸೆಳೆದವು.

ನಗರಸಭೆಯ ಆವರಣದಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆ ನಗರಸಭಾ ಅಧ್ಯಕ್ಷ ಗೋವಿಂದ ಮೇಲಗಿರಿ ಪೂಜೆ ಸಲ್ಲಿಸಿ ಕನ್ನಡಾಂಬೆಯ ಮೆರವಣಿಗೆಗೆ ಚಾಲನೆ ನೀಡಿದರು. ಜೆಎನ್ ರಸ್ತೆಯ ಮೂಲಕ ಹೊರಟ ಮೆರವಣಿಗೆಯಲ್ಲಿ ನಗರದ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಮುಖ್ಯಸ್ಥರು, ನಗರಸಭಾ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆಗಳುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸಿದವು.

ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರೋಟರಿ ಕನ್ನಡ ಪ್ರಾಥಮಿಕ ಶಾಲೆಯ ನಂದಿಬೆಟ್ಟದ ದೃಶ್ಯ, ದ್ವಿತೀಯ ಸ್ಥಾನ ಪಡೆದ ಸೆಂಟ್ ಮೈಕಲ್ಸ್ ಕನ್ನಡ ಪ್ರಾಥಮಿಕ ಶಾಲೆಯ ಮೈಸೂರಿನ ಮಹಿಷಾಸುರನ ದೃಶ್ಯ, ತೃತೀಯ ಸ್ಥಾನ ಪಡೆದ ಜನತಾ ವಿದ್ಯಾಲಯ ಕನ್ನಡ ಪ್ರಾಥಮಿಕ ಶಾಲೆಯ ಜೀವನದಿ ಕಾವೇರಿಯ ದೃಶ್ಯಾವಳಿಗಳು ನೋಡುಗರ ಮನಸೆಳೆದವು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ರೋಟರಿ ಪ್ರೌಢಶಾಲೆಯ ಕಾರವಾರ ಕಡಲತೀರದ ಸೀಬರ್ಡ್ ನೌಕೆ ಹಾಗೂ ದ್ವಿತೀಯ ಸ್ಥಾನ ಕೆನರಾವೆಲ್ಫೆರ್ ಟ್ರಸ್ಟಿನ ಜನತಾ ವಿದ್ಯಾಲಯ ಪ್ರೌಢಶಾಲೆ ಸಿದ್ದಪಡಿಸಿದ್ದ ಧರ್ಮಸ್ಥಳ ಶ್ರಿಮಂಜುನಾಥೇಶ್ವರ ರಥೋತ್ಸವ ದೃಶ್ಯಾವಳಿ ಪಡೆದುಕೊಂಡರೆ, ಕಾಲೇಜು ವಿಭಾಗದದಲ್ಲಿ ಪ್ರಥಮ ಸ್ಥಾನವನ್ನು ಎಂ.ಜಿ.ಸಿ.ಎಂ. ಕನ್ಯಾವಿದ್ಯಾಲಯ ಪ.ಪೂ.ಕಾಲೇಜು ಪಡೆಯಿತು.

ಮುಂಡಗೋಡ ವರದಿ
`ನಾಡಿಗಾಗಿ ದುಡಿಯುವ ಹಂಬಲ ಎಲ್ಲರಲ್ಲಿ ಬಂದಾಗ ಮಾತ್ರ ತಾಯಿ ಭುವನೇಶ್ವರಿ ಸಮೃದ್ಧಿಯಿಂದ ನಲಿಯುತ್ತಾಳೆ~ ಎಂದು ತಹಶೀಲ್ದಾರ ವಿ.ಎನ್.ನಾಡಗೌಡ ಹೇಳಿದರು.

ಇಲ್ಲಿಯ ವಿವೇಕಾನಂದ ಬಯಲು ರಂಗಮಂದಿರದಲ್ಲಿ 57ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಏಕೀಕರಣವಾದ ನಂತರ ರಾಜ್ಯವು ಎಲ್ಲ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಲಾಗುತ್ತಿದ್ದು ರಾಜ್ಯದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಲು ಯುವಜನತೆ ಮುಂದಾಗಬೇಕು. ನಾಡಿನ ಪ್ರತಿಯೊಬ್ಬ ಜನರು ಸಕರಾತ್ಮಕವಾಗಿ ಯೋಚಿಸಿ ಮುನ್ನಡೆದರೆ ನಾಡಿನ ಅಭಿವೃದ್ಧಿ ಸಾಧ್ಯ~ ಎಂದರು.

ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಇದಕ್ಕೂ ಮುನ್ನ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ತಾಯಿ ಭುವನೇಶ್ವರಿಗೆ ಶಾಸಕ ವಿ.ಎಸ್.ಪಾಟೀಲ ಸೇರಿದಂತೆ ಹಲವು ಗಣ್ಯರು ಪೂಜೆ ಸಲ್ಲಿಸಿದರು.

ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಸಹ ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಮಳೆಯನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಜನ ಮೆಚ್ಚಿದ ಅಧಿಕಾರಿಗಳಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತ ಜನಸಾಮಾನ್ಯರಿಗೆ ಮೆಚ್ಚುಗೆಯಾಗಿರುವ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ.ಪಂ.ಅಧ್ಯಕ್ಷ ಎಂ.ಕೆ.ಗಡವಾಲೆ, ಉಪಾಧ್ಯಕ್ಷ ನಾಗಭೂಷಣ ಹಾವಣಗಿ, ತಾ.ಪಂ.ಅಧ್ಯಕ್ಷೆ ಕೊಂಡುಬಾಯಿ ಜೋರೆ, ಬಿ.ಎಫ್.ಬೆಂಡಿಗೇರಿ, ಎಲ್.ಟಿ.ಪಾಟೀಲ, ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪಿ.ಪಿ.ಛಬ್ಬಿ, ಸರೋಜಾ ಹೇಂದ್ರೆ, ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ, ದಲಿತ ಮುಖಂಡರಾದ ಚಿದಾನಂದ ಹರಿಜನ, ಎನ್.ಡಿ.ಕಿತ್ತೂರ, ಹನಮಂತ ಆರೆಗೊಪ್ಪ, ಜಿ.ಪಂ. ಸದಸ್ಯರಾದ ಅಶೋಕ ಸಿರ್ಸಿಕರ, ರತ್ನಕ್ಕ ನಿಂಬಾಯಿ, ಸುಮಾ ಲಮಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.