ಭಾನುವಾರ, ಜೂನ್ 20, 2021
21 °C

ಮಳೆ ನೀರು ಸಂಗ್ರಹ: ತಂತ್ರಜ್ಞರಿಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ನಗರದ 60/40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಾಣಗೊಂಡ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ನಿಗದಿಪಡಿಸಿರುವ ಕೊನೆಯ (ಮಾರ್ಚ್ 31) ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಸಂಗ್ರಹದ ಸಲಕರಣೆ ಮತ್ತು ಅವುಗಳನ್ನು ಅಳವಡಿಸುವ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಬಂದಿದೆ.ಮಳೆ ನೀರಿನ ಸಂಗ್ರಹ ಪದ್ದತಿಯನ್ನು ತಮ್ಮ ಕಟ್ಟಡಗಳಲ್ಲಿ ಅಳವಡಿಸಲು ಡಿಸೆಂಬರ್ 31ರಂದು ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಆದರೆ ನಿಗದಿತ ದಿನವನ್ನು ವಿಸ್ತರಿಸಿದ್ದರಿಂದ ಡಿಸೆಂಬರ್ ತಿಂಗಳಿನಲ್ಲಿ ಮಳೆ ನೀರಿನ ಶೋಧಕ ಯಂತ್ರಗಳ ಖರೀದಿಗೆ ನೋಂದಾಯಿಸಿದವರು, ಖರೀದಿಸದೇ ವಾಪಸು ಪಡೆದಿದ್ದರು. ಆದರೆ, ಗಡುವು ಮುಕ್ತಾಯಗೊಳ್ಳಲು ಒಂದೇ ವಾರ ಉಳಿದಿರುವಾಗ ಮಳೆ ನೀರಿನ ಶೋಧಕ ಯಂತ್ರಗಳ ಖರೀದಿ ಮತ್ತು ಅದನ್ನು ಅಳವಡಿಸುವ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಳೆ ನೀರು ಸಲಕರಣೆಗಳ ಮಾರಾಟಗಾರ ವಿಜಯರಾಜು, `ಮಾರ್ಚ್ ಒಂದು ತಿಂಗಳಿನಲ್ಲೇ ಈವರೆಗೆ 2,500 ಮಳೆ ನೀರು ಶೋಧಕ ಯಂತ್ರಗಳನ್ನು ಮಾರಾಟ ಮಾಡಿದ್ದೇನೆ. ಅಲ್ಲದೆ, ಪ್ರತಿ ದಿನ ಈ ಯಂತ್ರಗಳನ್ನು ಜೋಡಿಸುವಂತೆ ನೂರಕ್ಕೂ ಹೆಚ್ಚು ಕರೆಗಳು ಬರುತ್ತಿವೆ~ ಎಂದು ಹೇಳಿದರು.`ಜನರಲ್ಲಿ ನೀರು ಉಳಿಸುವ ಜಾಗೃತಿಗಿಂತಲೂ ನಿಗದಿತ ಸಮಯದೊಳಗೆ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಕೊಳ್ಳಲು ಕಾತರರಾಗಿದ್ದಾರೆ.ಕೋಟಿ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಿಸುತ್ತಾರೆ. ಆದರೆ 20 ಸಾವಿರ ರೂಪಾಯಿ ಖರ್ಚು ಮಾಡಿ ಮಳೆ ನೀರು ಸಂಗ್ರಹ ಪದ್ದತಿಯನ್ನು ಅಳವಡಿಸಿಕೊಳ್ಳಲು ಉದಾಸೀನ ತೋರುವುದು ಏಕೆ ಎನ್ನುವುದು ಅರ್ಥವಾಗುವುದಿಲ್ಲ~ ಎಂದು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.