ಗುರುವಾರ , ಜೂನ್ 17, 2021
29 °C

ಮಸಗುಪ್ಪಿ: ಸಾರಾಯಿ ವಶಪಡಿಸಿಕೊಂಡ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ಸಮೀಪದ ಮಸಗುಪ್ಪಿ ಗ್ರಾಮದಲ್ಲಿ  ಸಾರಾಯಿ ಮಾರಾಟ ಮಾಡುತ್ತಿದ ವ್ಯಕ್ತಿಗಳನ್ನು ಅಲ್ಲಿಯ ಸ್ವ-ಸಹಾಯ ಸಂಘದ ಮಹಿಳೆಯರು ಪತ್ತೆ ಹಚ್ಚಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.  ಈ ಮೂಲಕ ಮಹಿಳೆಯರು ಗ್ರಾಮದಲ್ಲಿ ಪ್ರಾರಂಭಿಸಿರುವ ಸಾರಾಯಿ ನಿಷೇಧ ಚಳುವಳಿಯು ವಿಶೇಷ ಗಮನಸೆಳೆದಿದೆ.ಕದ್ದು ಮುಚ್ಚಿ ಗ್ರಾಮದಲ್ಲಿ ಸಾರಾಯಿ ಮಾರುತ್ತಿದ್ದ ಅಪ್ಪಯ್ಯ ಬಾಳಪ್ಪ ಬಡ್ನಿಂಗಗೋಳ ಈತನ ಬಳಿಯಿಂದ ಅಂದಾಜು ರೂ 3,819  ಮೌಲ್ಯದ ಸಾರಾಯಿ ಮೂಡಲಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನೋಬ್ಬ ಆರೋಪಿ ಭೀಮಪ್ಪ ರಾಯಪ್ಪ ಸುಣಧೋಳಿ ಪರಾರಿ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಗುಡಿಸಲಿಗೆ ಬೆಂಕಿ:

ಯಮಕನಮರಡಿ: ಸಮೀಪದ ಬಿದ್ರೇವಾಡಿ ಗ್ರಾಮದಲ್ಲಿ ರವಿವಾರ ರಂದು ಬೆಳಿಗ್ಗೆ ಆಕಸ್ಮಿಕವಾಗಿ ಎರಡು ಗುಡಿಸಲಿಗೆ ಹಾಗೂ ಬಣವಿಗೆ ಬೆಂಕಿ ಹತ್ತಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಗ್ರಾಮದ ರಾಜು ಬಾಳಾಪ್ಪಾ ಮಾರಿಹಾಳಿ ಎರಡು ಎಮ್ಮೆ, ಗುಡಿಸಲು ಹಾಗೂ ಬಣವಿ ಮತ್ತು ಕೃಷಿ ಸಲಕರಣೆ ಸಂಪೂರ್ಣ ನಾಶವಾಗಿದೆ.ಮಲ್ಲಪ್ಪ  ಮಾರಿಹಾಳಿಅವರ ಒಂದು ಬಣವಿ, ಎರಡು ಆಕಳು, ಗುಡಿಸಲು ಸುಟ್ಟಿದೆ. ಸಂಕೇಶ್ವರ ಅಗ್ನಿ ಶಾಮಕದಳವರು ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಎರಡು ಕುಟುಂಬಗಳಿಗೆ ಸೇರಿ ಸುಮಾರು ರೂ. 2ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.