ಶನಿವಾರ, ಮೇ 8, 2021
18 °C

ಮಸುಕಾಗುತ್ತಿರುವ ಶಿಲ್ಪ ಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು, ಹಳೇಬೀಡಿನ ದೇವಾಲಯಗಳ ಶಿಲ್ಪಕಲೆ ಜಗತ್ಪ್ರಸಿದ್ಧ. ಈ ದೇವಸ್ಥಾನಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವ ಅರ್ಹತೆ ಪಡೆದಿವೆ. ಆದರೆ ಈ ಎರಡೂ ದೇವಸ್ಥಾನಗಳಲ್ಲಿ ಇರುವ ಶಿಲಾ ವಿಗ್ರಹಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಹಜ ಹೊಳಪನ್ನು ಕಳೆದುಕೊಂಡಿವೆ.ದೇವಸ್ಥಾನದ ಒಳ ಭಾಗದಲ್ಲಿ ಯಾವಾಗಲೂ ಕತ್ತಲು ಇರುತ್ತದೆ. ದೂರದ ಊರುಗಳಿಂದ ಬರುವ ಪ್ರವಾಸಿಗರು ಶಿಲ್ಪ ಕಲೆಯ ಕುಸುರಿ ಸೂಕ್ಷ್ಮಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ.ಅಲ್ಲಿ ಸರಿಯಾದ ಮಾರ್ಗದರ್ಶಿಗಳೂ ಇಲ್ಲ. ಸರ್ಕಾರ ಈ ಎರಡೂ ಅಪೂರ್ವ ದೇವಸ್ಥಾನಗಳನ್ನು ಉಪೇಕ್ಷಿಸಿದೆ ಎಂಬ ಭಾವನೆ ಅಲ್ಲಿಗೆ ಹೋದವರಿಗೆ ಆಗುತ್ತದೆ.ಸಂಬಂಧಪಟ್ಟ ಇಲಾಖೆಯವರು ಅಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಕಡೆಗೆ ಗಮನ ನೀಡಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.