ಗುರುವಾರ , ಜೂನ್ 4, 2020
27 °C

ಮಹಿಂದ್ರಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಂದ್ರಾ ಸ್ಪರ್ಧೆ

ಮಹಿಂದ್ರಾ ಮತ್ತು ಮಹಿಂದ್ರಾ ಕಂಪೆನಿಯು ನವೀನ ಮಾದರಿಯ `ಗೆಸ್ ದಿ ಪ್ರೈಸ್~ ಎಂಬ ಆನ್‌ಲೈನ್ ಸ್ಪರ್ಧೆ ನಡೆಸುತ್ತಿದೆ. ಇದರಲ್ಲಿ ವಿಜೇತ ಒಬ್ಬ ಅದೃಷ್ಟಶಾಲಿಗೆ ಮಹಿಂದ್ರಾ ಗ್ಲೋಬಲ್ ಕಾರ್ ಮತ್ತು  ನೋಯ್ಡಾದಲ್ಲಿ ನಡೆಯಲಿರುವ ದೇಶದ ಮೊದಲ ಫಾರ್ಮುಲಾ 1ರೇಸ್ ವೀಕ್ಷಿಸಲು 20 ಟಿಕೆಟ್ ನೀಡಲಾಗುತ್ತದೆ.ಅಂದಹಾಗೆ, ಒಂದು ಬಾರಿ ಅದೃಷ್ಟ ಕೈಕೊಟ್ಟರೆ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ನಿತ್ಯ ಹೊಸದಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.ಆಸಕ್ತರು www.mahindraXUV500.com ಗೆ ಲಾಗ್ ಆನ್ ಆಗಿ ಮಹಿಂದ್ರಾ ಎಕ್ಸ್‌ಯುವಿ 500 ನ ಬೆಲೆಯನ್ನು ಅಂದಾಜು ಮಾಡಿ ಹೇಳಬೇಕು. ಇದರ ಜತೆಗೆ  ಕೇಳುವ 2 ಸರಳ ಪ್ರಶ್ನೆಗಳಿಗೆ ಉತ್ತರ ನೀಡಬೇಕು.ಸ್ಪರ್ಧೆಯಲ್ಲಿ ಮಹಿಂದ್ರಾ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಎಕ್ಸ್‌ಯುವಿ 500 ಅನಾವರಣದ ಮಧುರ ಕ್ಷಣವನ್ನು ವೀಕ್ಷಿಸಲು ಇಚ್ಛಿಸುವ ಮಹೀಂದ್ರಾ ಅಭಿಮಾನಿಗಳು www.mahindraXUV500.comಗೆ ಭೇಟಿ ನೀಡಬಹುದು. ಈ ಕಾರಿನ ವೈಶಿಷ್ಟ್ಯತೆ, ಮಾಹಿತಿ ಹಾಗೂ ಅಂದವನ್ನು ಕಣ್ತುಂಬಿಕೊಳ್ಳಬಹುದು.ಮಹಿಂದ್ರಾ ಮತ್ತು ಮಹಿಂದ್ರಾ ಆಟೊಮೋಟಿವ್ ಡಿವಿಶನ್‌ನ ಹಿರಿಯ ಉಪಾಧ್ಯಕ್ಷ ವಿವೇಕ್ ನಾಯರ್ ಹೇಳುವಂತೆ ಎಕ್ಸ್‌ಯುವಿ 500 ಮಹೀಂದ್ರಾ ಕಂಪೆನಿಯ ಉತ್ಕೃಷ್ಟ ಹಾಗೂ ವಿಶ್ವದರ್ಜೆ ಗುಣವುಳ್ಳ ಉತ್ಪನ್ನವಾಗಿದೆ. `ಗೆಸ್ ದಿ ಪ್ರೈಸ್~ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಹಿಂದಿನ ಉದ್ದೇಶ.ಉತ್ಕೃಷ್ಟ ತಂತ್ರಜ್ಞಾನ, ವಿಶ್ವದರ್ಜೆ ಗುಣಮಟ್ಟ, ನಾವೀನ್ಯತೆ ಜತೆಗೆ ಕಾರ್ಪೋರೇಟ್ ಶೈಲಿಯಲ್ಲಿ ರೂಪುಗೊಂಡಿರುವ ಈ ವಾಹನ ಎಲ್ಲರ ಮನಕದಿಯುವುದರಲ್ಲಿ ಸಂದೇಹವೇ ಇಲ್ಲ~ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.