ಶನಿವಾರ, ಜೂನ್ 19, 2021
29 °C

ಮಹಿಳಾ ಉದ್ಯಮಕ್ಕೆ ಗೂಗಲ್‌ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಮಾಹಿತಿ ತಂತ್ರ ಜ್ಞಾನ ವಲಯದಲ್ಲಿ ಮಹಿಳಾ ಉದ್ಯ­ಮಿ­ಗಳನ್ನು ಉತ್ತೇಜಿ­ಸಲು ಗೂಗಲ್‌ ಮುಂದಾಗಿದೆ.ಅಂತರ­ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಯೋಜನೆ ಜಾರಿಗೆ ಬರಲಿದೆ. ಆರಂಭಿಕ ಹಂತದಲ್ಲಿರುವ (ಸ್ಟಾರ್ಟ್‌ ಅಪ್‌) ಐ.ಟಿ ಕಂಪೆನಿಗಳನ್ನು ಪ್ರೋತ್ಸಾ­ಹಿಸುವ  ವಿಶ್ವ ದಾದ್ಯಂತ ಇರುವ 40 ಸಂಸ್ಥೆಗಳಿಗೆ ₨6 ಕೋಟಿ ಧನ ಸಹಾಯ ಮಾಡುವುದಾಗಿ ಕಂಪೆನಿ ಹೇಳಿದೆ.ಭಾರತದ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ವ್ಯಾಪ್ತಿಗೆ ಬರುವ 10 ಸಾವಿರ ಸ್ಟಾರ್ಟ್‌ಅಪ್‌ ಕಂಪೆನಿಗಳಿಗೆ ಈ ನೆರವು ಲಭಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.