ಕಾಂಟೂರ್ ಇಂಡಿಯಾ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ `ಕಾಂಟೂರ್ಸ್ ಇಂಡಿಯಾ ವಿಮೆನ್ಸ್ ಡೇ ರನ್~ ಸ್ಪರ್ಧೆ ಆಯೋಜಿಸಿತ್ತು.

ಓಟವನ್ನು ಇಷ್ಟಪಡುವ ಬೆಂಗಳೂರು ಮಂದಿಗಾಗಿ ಹಾಗೂ ಹೆಣ್ಣು ಮಕ್ಕಳ ಹಕ್ಕು ರಕ್ಷಣೆ ಹಾಗೂ ಮಹಿಳಾ ಸಬಲೀಕರಣ ದೃಷ್ಟಿಯಿಂದ 3ನೇ ವರ್ಷದ `ವಿಮೆನ್ಸ್ ಡೇ ರನ್~ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಈ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ವಿಮೆನ್ಸ್ ಡೇ ರನ್ ಮೂಲಕ ಸ್ವಯಂಸೇವಾ ಸಂಸ್ಥೆಗಳಾದ `ಪರಿಕ್ರಮ~ ಹಾಗೂ `ಆಶಾ~ ಫೌಂಡೇಶನ್ಗೆ ಸಹಾಯ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡುವ ದೃಷ್ಠಿಯಿಂದ ಈ ಓಟದ ಸ್ಪರ್ಧೆ ನಡೆಸಲಾಗಿದೆ. ಮಹಿಳೆಯೂ ಶಿಕ್ಷಿತಳಾಗಿ ಆರೋಗ್ಯಯುತ ಜೀವನ ನಡೆಸಲು ಹಾಗೂ ಆಕೆಯ ಗುರಿ ಸಾಧನೆಗೆ ದಾರಿ ಮಾಡಿಕೊಡಲು ಸಹಕರಿಸಬೇಕಿದೆ ಎನ್ನುತ್ತಾರೆ ಕೌಂಟರ್ ಇಂಡಿಯಾ ನಿರ್ದೇಶಕಿ ಚಂದ್ರಾ ಗೋಪಾಲನ್.

5 ಹಾಗೂ 10ಕಿ.ಮೀ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಾರಾಂತ್ಯದ ರಜೆಯನ್ನು ಕಳೆಯುವ ಮಂದಿ ಓಟದಲ್ಲಿ ಭಾಗವಹಿಸಿ ಆನಂದಿಸಿದರು.
ಅಲ್ಲದೇ ವಿನೋದ, ನೃತ್ಯ ಹಾಗೂ ನಡಿಗೆ ಸೇರಿದ `ಮಜ್ಜಾ~ ರನ್ (1.6ಕಿ.ಮೀ) ಆಯೋಜಿಸಲಾಗಿತ್ತು.

ಇಲ್ಲಿ ನಾನಾ ಬಗೆಯ, ಚಿತ್ರ ವಿಚಿತ್ರ ವೇಷ ಭೂಷಣ ಧರಿಸಲು ಆಯೋಜಕರು ಮನವಿ ಮಾಡಿದ್ದರು. ಕೇಶ ವಿನ್ಯಾಸಕ್ಕೆ ಕೃತಕ ಕೇಶಧಾರಣೆ ಮಾಡಲು ಕೇಳಿಕೊಂಡಿದ್ದರು. ವಿವಿಧ ಬಗೆಯ ವಿಗ್ನಲ್ಲಿ ವಿಶೇಷ ಮೇಕಪ್ನಲ್ಲಿ ಓಡಲಾಗದವರು, ನಡೆಯದೇ ನರ್ತಿಸಿದವರು, ನರ್ತಿಸಲಾಗದೇ ನಡೆದವರು ಎರಡೂ ಬಿಟ್ಟು ಓಡಿದವರು ಈ ಮಜ್ಜಾ ರನ್ನಲ್ಲಿ ಮಜಾ ನೀಡಿದರು.

6ರಿಂದ 16ವರ್ಷದೊಳಗಿನ ಮಕ್ಕಳಿಗಾಗಿ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಕ್ಯಾಂ, ಬೌನ್ಸ್ ಬ್ಯಾಸ್ಕೇಟ್ಬಾಲ್, ನರ್ವಸ್ ಆಫ್ ಸ್ಟೀಲ್ ಇನ್ನಿತರೆ ಆಟಗಳು ಮಕ್ಕಳನ್ನು ರಂಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.