ಭಾನುವಾರ, ಜೂನ್ 20, 2021
28 °C

ಮಹಿಳಾ ದಿನಾಚರಣೆ: 16 ಮಂದಿಗೆ ಚೆನ್ನಮ್ಮ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ 16 ಜನ ಮಹಿಳೆಯರು ಮತ್ತು ಆರು ಸಂಸ್ಥೆಗಳನ್ನು ಆಯ್ಕೆ ಮಾಡಿದ್ದು, ಗುರುವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.2010-11ನೇ ಸಾಲಿನ ಪ್ರಶಸ್ತಿಗಾಗಿ ಒಟ್ಟು 109 ಪ್ರಸ್ತಾವಗಳು ಬಂದಿದ್ದವು. ಈ ಪೈಕಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಆರು ಸಂಸ್ಥೆಗಳು ಮತ್ತು ಮಹಿಳಾ ಅಭಿವೃದ್ಧಿ, ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ 16 ಮಹಿಳೆಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸಂಸ್ಥೆಗಳಿಗೆ ತಲಾ ರೂ 25 ಸಾವಿರ,  ವ್ಯಕ್ತಿಗಳಿಗೆ ತಲಾ ರೂ ಹತ್ತು ಸಾವಿರ, ಯಶೋಧರಮ್ಮ ಪ್ರಶಸ್ತಿಗೆ ತಲಾ ರೂ 25 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮೂರು ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೆ ಕ್ರಮವಾಗಿ ರೂ 50 ಸಾವಿರ, ರೂ 30 ಸಾವಿರ ಮತ್ತು ರೂ 20 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು.ಮೂರು ಅತ್ಯುತ್ತಮ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಕ್ರಮವಾಗಿ ರೂ 80 ಸಾವಿರ, ರೂ 70 ಸಾವಿರ ಮತ್ತು ರೂ 60 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ.ಪ್ರಶಸ್ತಿ ಪುರಸ್ಕೃತ ಮಹಿಳೆಯರು: ಮಹಿಳಾ ಅಭಿವೃದ್ಧಿ- ಲೀಲಾ ಕೃಷ್ಣಮೂರ್ತಿ, ಜಯನಗರ ಎರಡನೇ ಬಡಾವಣೆ, ಬೆಂಗಳೂರು. ಕೆ.ಬಿ.ಸರ್ವಮಂಗಳಾ ಶಾಸ್ತ್ರಿ, ಪ್ಯಾಲೆಸ್ ಕ್ರಾಸ್ ರೋಡ್, ಬೆಂಗಳೂರು. ಕೂಡಿಕಂಡಿ ಕಾವೇರಮ್ಮ ಸೋಮಣ್ಣ, ಬ್ರಾಹ್ಮಣರ ಬೀದಿ, ಮಡಿಕೇರಿ. ರೇಖಾ ಬ.ಪಾಟೀಲ, ಮೀನಾಕ್ಷಿ ಚೌಕ, ವಿಜಾಪುರ. ಪುಷ್ಪಾ ರಾಮಚಂದ್ರ ಪತ್ತಾರ್, ವಿವೇಕಾನಂದ ನಗರ, ಗದಗ. ಅನ್ನಪೂರ್ಣ ಅ.ನಿರ್ವಾಣಿ, ಅಯ್ಯನವರ ಬೀದಿ, ಮದವಾಲ, ಗೋಕಾಕ ತಾಲ್ಲೂಕು. ನಿರ್ಮಲಾ ಜೋಡಪ್ಪ ಯತ್ನಟ್ಟಿ, ಆಶ್ರಯ ಕಾಲೊನಿ, ಕುಕನೂರು.ಕಲಾ ಕ್ಷೇತ್ರ: ಶಿಲ್ಪಾ ನಂಜಪ್ಪ, ವೆಂಕಿಡ್ಸ್ ವ್ಯಾರಿ ಎಸ್ಟೇಟ್, ಮಡಿಕೇರಿ ತಾಲ್ಲೂಕು. ಎ.ರುಕ್ಮಿಣಿ, ನೃಸಿಂಹ, ಕೊಳದ ಬೀದಿ, ಚಾಮರಾಜನಗರ. ನಾಗರತ್ನ ನಾಗರಾಜ ಹಡಗಲಿ, ಮೃತ್ಯುಂಜಯ ನಗರ, ಧಾರವಾಡ. ನಸೀಮಬಾನು ಅಬ್ದುಲ್‌ಗಣಿ ಹಾವರಗಿ, ಚಾಲುಕ್ಯನಗರ, ಬಾದಾಮಿ. ಲಕ್ಷ್ಮಿಮಹಾದೇವ ಆರಿಬೆಂಚಿ, ನೀರಾವರಿ ಕಾಲೋನಿ, ಸವದತ್ತಿ.ಸಾಹಿತ್ಯ ಕ್ಷೇತ್ರ: ಪ್ರಮೀಳಾ ಕಾರ್ನಾಡು ಯಾನೆ, ಕಾಟಿಪಳ್ಳ-ಕೈಕಂಬ, ಮಂಗಳೂರು ತಾಲ್ಲೂಕು. ವಿಮಲಾ ಇನಾಮದಾರ, ಅಳವಂಡಿ, ಕೊಪ್ಪಳ ತಾಲ್ಲೂಕು. ಕ್ರೀಡಾ ಕ್ಷೇತ್ರ: ಎ.ಶಾಹಿನಾ, ಗೋವಿಂದಪ್ಪ ಬ್ಲಾಕ್, ದೇವರ ಜೀವನಹಳ್ಳಿ, ಬೆಂಗಳೂರು. ಕೆ.ವಿಜಯಕುಮಾರಿ, ಸ್ಲಂ ಬೋರ್ಡ್, ಹೊಳೆನರಸೀಪುರ.ಸಂಘ ಸಂಸ್ಥೆಗಳು: ಸಿಕೋಪ-ಬೆಂಗಳೂರು, ಪರಿಪೂರ್ಣ ಗ್ರಾಮೀಣಾಭಿವೃದ್ಧಿ ಮಹಿಳಾ ಸೇವಾ ಸಂಸ್ಥೆ- ನೇಕಾರ ಓಣಿ, ಹೊಸ ಯಲ್ಲಾಪುರ, ಧಾರವಾಡ. ಯಶಸ್ವಿನಿ ಮಹಿಳಾ ಮಂಡಳಿ-ಸೋಮೇನಹಳ್ಳಿ ಗ್ರಾಮ, ಕೋಲಾರ ಜಿಲ್ಲೆ. ಬಸವೇಶ್ವರ ವಿದ್ಯಾಸಂಸ್ಥೆ-ಗಾರೆಹಟ್ಟಿ, ಚಿತ್ರದುರ್ಗ. ಕೃಷಿ ಹಾಗೂ ಗ್ರಾಮೀಣ ಯುವಜನ ಅಭಿವೃದ್ಧಿ ಸಂಸ್ಥೆ- ಹಾವೇರಿ ಜಿಲ್ಲಾ ಘಟಕ, ರಾಜೇಂದ್ರ ನಗರ, ಹಾವೇರಿ. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ- ರೋಜಿಪುರ, ದೊಡ್ಡಬಳ್ಳಾಪುರ.2011-12ನೇ ಸಾಲಿನ ಮೂರು ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳು: ಆದರ್ಶ ಸ್ತ್ರೀಶಕ್ತಿಗುಂಪು (ಪ್ರಥಮ)- ಅಗರನಹಳ್ಳಿ, ಹುಣಸೂರು ತಾಲ್ಲೂಕು. ನಂದಿನಿ ಸ್ತ್ರೀಶಕ್ತಿಗುಂಪು (ದ್ವಿತೀಯ)-ನಂದಿಗುಡಿ, ಹರಿಹರ ತಾಲ್ಲೂಕು. ಯಶಸ್ವಿನಿ ಸ್ತ್ರೀಶಕ್ತಿಗುಂಪು (ತೃತೀಯ)- ಮಾರಸಂದ್ರ, ಮಾಲೂರು ತಾಲ್ಲೂಕು.ಯಶೋಧರಮ್ಮ ದಾಸಪ್ಪ ಪ್ರಶಸ್ತಿ- ಬೆಂಗಳೂರು ವಿಭಾಗ: ಭೂಮಿಕಾ ಸ್ತ್ರೀಶಕ್ತಿಗುಂಪು-ಹೊಳೆ ಹನಸವಾಡಿ, ಶಿವಮೊಗ್ಗ ತಾಲ್ಲೂಕು. ಮೈಸೂರು ವಿಭಾಗ: ದ್ಯಾವಮ್ಮ ಸ್ತ್ರೀಶಕ್ತಿಗುಂಪು- ಕಂಚನಹಳ್ಳಿ, ಹಾಸನ ತಾಲ್ಲೂಕು.ಬೆಳಗಾವಿ ವಿಭಾಗ: ಮಹೇಶ್ವರಿ ಸ್ತ್ರೀಶಕ್ತಿಗುಂಪು- ಡಮ್ಮಳ್ಳಿ, ಹಿರೇಕೆರೂರು ತಾಲ್ಲೂಕು. ಗುಲ್ಬರ್ಗ ವಿಭಾಗ: ಜೀಜಾಮಾತಾ ಮೈಲೂರ ಸ್ತ್ರೀಶಕ್ತಿಗುಂಪು- ಕೆಇಬಿ ಕಾಲೊನಿ, ಬೀದರ್ ತಾಲ್ಲೂಕು.ಮೂರು ಅತ್ಯುತ್ತಮ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟಗಳು: ಸುಳ್ಯ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ಪ್ರಥಮ), ಚಿಕ್ಕನಾಯಕನಹಳ್ಳಿ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ದ್ವಿತೀಯ), ಮೈಸೂರು ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ (ತೃತೀಯ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.