ಭಾನುವಾರ, ಜನವರಿ 26, 2020
18 °C

ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್‌: ಪಟ್ಟಣದ ದತ್ತ ದೇವಸ್ಥಾನ ದಲ್ಲಿ ಗೀತಾ ಜಯಂತಿ ಕಾರ್ಯಕ್ರಮದ ಅಂಗವಾಗಿ ದಿವ್ಯ ಜೀವನ ಸಂಘದ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ನಡೆಯಿತು.ದೇವಸ್ಥಾನದ ಪ್ರಾಂಗಣದಲ್ಲಿ ದಿವ್ಯ ಜೀವನ ಸಂಘದ ಅಧ್ಯಕ್ಷ ಪಂ.ಗಂಗಾಧರ ಶಾಸ್ತ್ರಿ ಕಾಶೀಕರ ನೇತೃತ್ವದಲ್ಲಿ ಕುಂಕು ಮಾರ್ಚನೆಯ ಧಾರ್ಮಿಕ ವಿಧಿ ವಿಧಾನ  ನಡೆದವು. ಲಿಲಿತಾ ಸಹಸ್ರ ನಾಮಾ ವಳಿಯ ಮೂಲಕ ಸುಹಾಸಿನಿಯರಿಂದ ಲಕ್ಷ ಕುಂಕುಮಾರ್ಚನೆ ಪೂರ್ಣ ಗೊಂಡಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು.ಶಾಂಭವಿ ಪಾಟೀಲ, ಶರ್ಮದಾ ಕಾಶೀಕರ, ಶ್ರೇಯಸ್‌ ಪಾಟೀಲ, ಲಕ್ಷ್ಮೀ  ಪೂಜಾರ, ಸಚ್ಚಿದಾನಂದ ಕಾಶೀಕರ, ಸಂಪದಾ ಪೂಜಾರ, ವರ್ಷಿಣಿ ಕರಗುದರಿ, ಶ್ರೀಶ ಪೋತದಾರ, ಮಾಲಸಾ ಸರಾಫ, ಭುವನ ಕರಗುದರಿ, ಮೈತ್ರಿ ಚಿನ್ನಮುಳಗುಂದ, ವೇದಶ್ರೀ ಕರಗುದರಿ, ಶ್ರೇಯಾ ಪೂಜಾರ ಸೇರಿದಂತೆ 20 ಕ್ಕೂ ಅಧಿಕ ವಿದ್ಯಾರ್ಥಿಗಳು ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಜಿ.ಆರ್‌.ಪೋತದಾರ ನೇತೃತ್ವದಲ್ಲಿ ನಡೆದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಅರ್ಚಕ ಮುಕುಂದಭಟ್‌ ಕಾಗಿನೆಲ್ಲಿ, ಘನಶಾಮ್‌ ದೇಶಪಾಂಡೆ, ಆದಿತ್ಯಭಾರತಿ ದೇಶಪಾಂಡೆ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)