ಭಾನುವಾರ, ಜೂನ್ 13, 2021
20 °C

ಮಹಿಳೆಯರಿಗೆ ಬಡ್ತಿ ಅವಕಾಶ ಕಡಿಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆರುಸಲೇಂ/ಲಂಡನ್‌ (ಪಿಟಿಐ­): ಭಾರಿ ಒತ್ತಡ­ದಲ್ಲಿ ಕೆಲಸ ಮಾಡು­­ತ್ತಿರುವ ಉದ್ಯೋ­ಗಸ್ಥ ಮಹಿಳೆ­ಯ­ರಿಗೆ ಕೆಲಸಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ!ಕಡಿಮೆ ಸಂಬಳ ಮತ್ತು ಭಾರಿ ಒತ್ತಡ ಗಳ ಮಧ್ಯೆ ಹೆಚ್ಚು ಕೆಲಸ ಮಾಡುತ್ತಿರುವ ಮಹಿಳೆ­ಯರಿಗೆ ಬಡ್ತಿ ಅವಕಾಶ ಕೂಡ ಕಡಿಮೆ ಎಂಬ ಅಂಶ­ವನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ.ಇಸ್ರೇಲ್‌ನ ಟೆಲ್‌ ಅವಿವ್‌ ವಿಶ್ವ­ವಿದ್ಯಾ­ಲಯ ಮತ್ತು ಹೈಫಾ ವಿಶ್ವವಿದ್ಯಾಲಯದ ಅಧ್ಯಾ­ಪಕರು 27 ದೇಶಗಳ ಉದ್ಯೋ­ಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ­ಗಳ ಮೇಲೆ ಬೆಳಕು ಚೆಲ್ಲುವ ಕುರಿತು ಕೈಗೊಂಡ ಅಧ್ಯಯನ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಈ ನಿರ್ಧಾರಕ್ಕೆ ಬರುವ ಸಂಶೋ­ಧ­ಕರು 27 ದೇಶಗಳ  ೯,೦೦೦ ಉದ್ಯೋ­­ಗಸ್ಥ ಮಹಿಳೆಯರು ಮತ್ತು 8,500 ಪುರುಷರ ಸಮೀಕ್ಷೆ ನಡೆಸಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆ­ಯರಿಗೆ ನೀಡುವ ಸೌಲಭ್ಯ, ವಾತಾ­ವ­ರಣ ಕೂಡ ಹೇಳಿ­ಕೊಳ್ಳುವ ರೀತಿ ಇಲ್ಲ. ಪುರು­ಷ­ರು ಅನು­ಭವಿಸುವ ಸೌಲಭ್ಯ ಬಳಸಿ­ಕೊಳ್ಳಲು ಮಹಿಳೆಗೆ ಸಾಧ್ಯ­ವಾಗಿಲ್ಲ . ಅಮೆರಿಕ, ಆಸ್ಟ್ರೇ­ಲಿಯಾ, ಫ್ರಾನ್ಸ್‌, ಜಪಾನ್‌, ರಷ್ಯಾ ಸೇರಿ 27 ದೇಶ­ಗಳ ಮಹಿಳೆ­ಯರು ಮತ್ತು ಪುರುಷರ ಅಭಿಪ್ರಾಯ ಪಡೆಯಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.