ಗುರುವಾರ , ಫೆಬ್ರವರಿ 25, 2021
23 °C

ಮಾಂಸ ರಫ್ತು: ಮುಂಚೂಣಿಯಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಂಸ ರಫ್ತು: ಮುಂಚೂಣಿಯಲ್ಲಿ ಭಾರತ

ಗೋಮಾಂಸ ಸೇವನೆ ಮತ್ತು ನಿಷೇಧಕ್ಕೆ ಸಂಬಂಧಿಸಿದಂತೆ  ದೇಶದಲ್ಲಿ ನಡೆಯುತ್ತಿರುವ ವ್ಯಾಪಕ ಚರ್ಚೆ, ಬಲಪಂಥೀಯರ ವಿರೋಧ, ರಾಜಕೀಯ ಬಣ್ಣ ಮುಂತಾದ ಬೆಳವಣಿಗೆಗಳು ದೇಶಿ  ಮಾಂಸ ರಫ್ತು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ವಿಶ್ವ ಆರೋಗ್ಯ ಸಂಸ್ಥೆ ಯ (WHO) ಇತ್ತೀಚಿನ ವರದಿಗಳ ಪ್ರಕಾರ, ಎಮ್ಮೆ / ಕೋಣದ ಮಾಂಸದ ಅಂದಾಜು ₹ 30 ಸಾವಿರ ಕೋಟಿಗಳಷ್ಟು ವಹಿವಾಟು ಕುಸಿಯುವ ಹಾದಿಯಲ್ಲಿದೆ.  ಮಾಂಸದ ರಫ್ತಿನಲ್ಲಿ ದೇಶ ವಿಶ್ವದಲ್ಲಿಯೇ ಮುಂಚೂಣಿಯಲ್ಲಿ ಇದೆ.ದನದ ಮಾಂಸ ಮತ್ತು ಕೋಣದ ಮಾಂಸ ರಫ್ತಿಗೆ ಸಂಬಂಧಿಸಿದಂತೆ ದೇಶದಲ್ಲಿ ಗೊಂದಲ ಇದೆ. ಭಾರತ ಬರೀ ಕೋಣದ ಮಾಂಸ ರಫ್ತು ಮಾಡುತ್ತಿದೆ.  ಕೆಲವೆಡೆ ದನದ ಮಾಂಸದ ವಹಿವಾಟು ನಡೆಯುತ್ತಿದೆ ಎಂದು  ತಪ್ಪಾಗಿ ಭಾವಿಸಿ ಕೋಣ ಮಾಂಸದ ವಹಿವಾಟಿನಲ್ಲಿ ತೊಡಗಿದವರ ಮೇಲೆ ದಾಳಿ ನಡೆಯುತ್ತಿದೆ ಎಂದು ರಫ್ತುದಾರರು ಆರೋಪಿಸುತ್ತಾರೆ. ದನದ ಮಾಂಸದ ವಹಿವಾಟಿನ ಮೇಲೆ ದೇಶದಲ್ಲಿ 1947ರಿಂದಲೇ  ನಿಷೇಧ ಜಾರಿಯಲ್ಲಿ ಇದೆ. ಅಮೆರಿಕ ಸರ್ಕಾರವು ಎಮ್ಮೆ /ಕೋಣದ (buffalo)  ಮಾಂಸವನ್ನೂ ದನದ ಮಾಂಸ (beef) ಎಂದೇ ವರ್ಗೀಕರಿಸಿದೆ.ಭಾರತದಿಂದ ಮಾಂಸ ಖರೀದಿಸುತ್ತಿದ್ದ ವಿಯೆಟ್ನಾಂ ಮತ್ತು ಈಜಿಪ್ಟ್‌ ದೇಶಗಳಿಂದ ಬೇಡಿಕೆ ಕುಸಿದಿರುವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಇಂತಹ ಮಾಂಸ ಸೇವನೆಯು (red meat) ಆರೋಗ್ಯದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನೀಡಿರುವ ಎಚ್ಚರಿಕೆ ಮುಂತಾದವು ರಫ್ತು ವಹಿವಾಟು ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.  ಇಂತಹ ಮಾಂಸದ ಸೇವನೆಯು ಕ್ಯಾನ್ಸರ್‌ ಸಾಧ್ಯತೆ ಹೆಚ್ಚಿಸುತ್ತದೆ ಎಂದು ‘ಡಬ್ಲ್ಯುಎಚ್‌ಒ’ ಅಭಿಪ್ರಾಯಪಟ್ಟಿದೆ.ಪ್ರಸಕ್ತ ಸಾಲಿನಲ್ಲಿ ಈ ಮಾಂಸ ರಫ್ತು ವಹಿವಾಟು ಸ್ಥಿರಗೊಳ್ಳುವ ಅಥವಾ ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ ವರದಿಗಳ ಅನ್ವಯ, ಇತ್ತೀಚಿನ ವರ್ಷಗಳಲ್ಲಿ ಈ ಮಾಂಸ ರಫ್ತು ವಹಿವಾಟು ಶೇ 9ರಷ್ಟು ಕಡಿಮೆಯಾಗುತ್ತಿದೆ.ಹೆದರಿಕೆ: ಕಸಾಯಿಖಾನೆಗಳಿಗೆ ಆಕಳು, ದನ, ಎಮ್ಮೆ, ಕೋಣ ಸಾಗಿಸುವ ವ್ಯಕ್ತಿಗಳು ಮತ್ತು ಮಾಂಸ ರಫ್ತು ವಹಿವಾಟುದಾರರ ಮೇಲೆ ನಡೆಯುತ್ತಿರುವ ಅನೇಕ ದಾಳಿ  ಪ್ರಕರಣಗಳು ಎಮ್ಮೆ / ಕೋಣ ಮಾಂಸದ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.