ಬುಧವಾರ, ಜನವರಿ 29, 2020
27 °C

ಮಾತುಕತೆ ಫಲಪ್ರದ: ರೈತರ ಪ್ರತಿಭಟನೆ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರೈತ ಮುಖಂಡರು ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಸೋಮ­ವಾರ ನಡೆದ ಮಾತುಕತೆಯ ಹಿನ್ನೆಲೆ­ಯಲ್ಲಿ ಸುವರ್ಣ ಸೌಧದ ಎದುರು ಡಿ. 4 ರಂದು ಆಯೋಜಿಸಿದ್ದ ರೈತರ ಬೃಹತ್‌ ಪ್ರತಿಭಟನಾ ಸಭೆಯನ್ನು ಹಿಂದಕ್ಕೆ ಪಡೆಯಲಾಗಿದೆ. ರೈತರ ಪ್ರತಿ­ಭ­ಟನೆಯನ್ನೂ ಸಹ ಹಿಂತೆಗೆದುಕೊಳ್ಳ­ಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿದ ನಂತರ ‘ಪ್ರಜಾ­ವಾಣಿ’­ಯೊಂದಿಗೆ ಮಾತನಾಡಿದ ಅವರು, ಪ್ರತಿ ಟನ್‌ ಕಬ್ಬಿಗೆ ₨ 1000 ಹೆಚ್ಚುವರಿ ಸಹಾಯಧನ ನೀಡುವಂತೆ ಒತ್ತಾಯಿಸಲಾ­ಯಿತು. ಕಬ್ಬಿಗೆ ದರ ನಿಗದಿ ಪಡಿಸಿವುದು ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಡಿ. 6 ರಂದು ಕೇಂದ್ರದ ಕೃಷಿ ಸಚಿವರು ಮುಖ್ಯಮಂತ್ರಿಗಳ ಸಭೆ ಕರೆದಿ­ದ್ದಾರೆ. ಸಭೆಯಲ್ಲಿ ಸಹಾಯಧನ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಡಿ. 9 ರಂದು ರೈತ ಮುಖಂಡರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಸಭೆಯ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)