ಗುರುವಾರ , ಜೂನ್ 24, 2021
27 °C

ಮಾದರಿ ಕ್ಷೇತ್ರಕ್ಕೆ ಪಣ: ಶಿವನಗೌಡ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ರಾಯಚೂರು ಲೋಕ­ಸಭಾ ಕ್ಷೇತ್ರದ ಮತದಾರರು ಚುನಾವ­ಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಮಾಡಲು ತಮಗೆ ಆಶೀರ್ವದಿಸಿ ಲೋಕಸಭೆಗೆ ಕಳುಹಿಸಿದರೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿರುವುದಾಗಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಹೇಳಿದರು.ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ  ಮಾತನಾಡಿ, ಕಳೆದ ಆರೂವರೆ ವರ್ಷದಲ್ಲಿ ಈ ಕ್ಷೇತ್ರದಿಂದ ಆಯ್ಕೆಗೊಂಡ ಯಾವೊಬ್ಬ ಪ್ರತಿನಿಧಿಗಳು ಅಭಿವೃದ್ಧಿ ದೃಷ್ಟಿಯಿಂದ ಚಿಂತನೆ ನಡೆಸಿಲ್ಲ. ತಮಗೆ ಒಂದು ಅವಕಾಶ ನೀಡಿದರೆ ಹತ್ತಾರು ಯೋಜನೆಗಳನ್ನು ಈ ಕ್ಷೇತ್ರಕ್ಕೆ ತಂದುಕೊಡುವ ಆಶಾಭಾವನೆ ವ್ಯಕ್ತಪಡಿಸಿದರು.ಈ ಕ್ಷೇತ್ರ ವ್ಯಾಪ್ತಿಯ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಯಾವೊಂದು ಪ್ರಗತಿಪರ ಯೋಜನೆ ಅನುಷ್ಠಾನಗೊಂಡಿಲ್ಲ. ಖರ್ಗೆ ಅವರ ಬಗ್ಗೆ ಗೌರವವಿದೆ. ಅವರು ಗುಲ್ಬರ್ಗಕ್ಕೆ ಮಾತ್ರ ಸೀಮಿತಗೊಂಡಿದೆ. ಎರಡು ಜಿಲ್ಲೆಗಳಲ್ಲಿ ಎಂಜಿನಿರಿಂಗ್‌ ಕಾಲೇಜು ಜಿಲ್ಲಾ ಆಸ್ಪತ್ರೆಗಳ ಮೇಲ್ದರ್ಜೆ, ನಿರಂತರ ಶುದ್ದ ಕುಡಿಯುವ, ರೈಲ್ವೆ, ವಿಮಾನ­ಯಾನ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂದರು.ಮಲ್ಲಪ್ಪ ಅಂಕುಶದೊಡ್ಡಿ, ಸಿದ್ಧನಗೌಡ ಪೊಲೀಸ್‌ ಪಾಟೀಲ, ಟಿ.ಆರ್‌. ನಾಯಕ್‌, ಸಿದ್ಧು ಬಂಡಿ, ಶ್ವೇತಾ ಮೇಟಿ, ರಮೇಶ ಜೋಷಿ ಮಾತನಾಡಿದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜಿ.ಜಿ. ನಾಯಕ, ಜಗನ್ನಾಥ ದೇಸಾಯಿ, ಜೂವಲೆಪ್ಪ ನಾಯಕ್‌, ಚೆನ್ನಬಸವ ಹಿರೇಮಠ, ಶಶಿಕಾಂತ ಗಸ್ತಿ, ಸರೋಜಾ ಪಾಟೀಲ, ಲಕ್ಷ್ಮಿಕಾಂತರೆಡ್ಡಿ ಮುನ್ನೂರು, ಶಿವಾನಂದ ನಾಯಕ್‌, ದೇವೇಂದ್ರ ನಾಯಕ್‌, ನಾಯಾಯಣ ನಾಯಕ್‌, ಸಿದ್ಧು ಬಡಿಗೇರ, ಶರಣಯ್ಯಸ್ವಾಮಿ ಗೊರೆಬಾಳ, ಸಂಗಮೇಶ ಹತ್ತಿಗುಡ್ಡ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.