ಮಾದರಿ ಕ್ಷೇತ್ರವಾಗಿ ಕೊಪ್ಪಳ ಅಭಿವೃದ್ಧಿ: ಮುಖ್ಯಮಂತ್ರಿ ಘೋಷಣೆ

7

ಮಾದರಿ ಕ್ಷೇತ್ರವಾಗಿ ಕೊಪ್ಪಳ ಅಭಿವೃದ್ಧಿ: ಮುಖ್ಯಮಂತ್ರಿ ಘೋಷಣೆ

Published:
Updated:
ಮಾದರಿ ಕ್ಷೇತ್ರವಾಗಿ ಕೊಪ್ಪಳ ಅಭಿವೃದ್ಧಿ: ಮುಖ್ಯಮಂತ್ರಿ ಘೋಷಣೆ

ಕೊಪ್ಪಳ: ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಅವರು ನಗರದಲ್ಲಿ ಶುಕ್ರವಾರ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ `ರೋಡ್ ಶೋ~ ಕಾರ್ಯಕ್ರಮದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.`ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸರ್ಕಾರವೂ ಸ್ಪಂದಿಸಲಿದೆ~ ಎಂದು ಭರವಸೆ ನೀಡಿದರು.ಸಂಸದ ಅನಂತ ಕುಮಾರ್ ಸಹ ಮಾತನಾಡಿದರು.ಅಭ್ಯರ್ಥಿ ಸಂಗಣ್ಣ ಕರಡಿ, ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಸಂಸದ ಶಿವರಾಮಗೌಡ, ಶಾಸಕರಾದ ಪರಣ್ಣ ಮುನವಳ್ಳಿ, ಎನ್. ಶಂಕ್ರಪ್ಪ, ಮುಖಂಡರಾದ ಸಿ.ಟಿ.ರವಿ, ಕೆಎಚ್‌ಡಿಸಿ ಅಧ್ಯಕ್ಷ ಎನ್.ಡಿ.ಲಕ್ಷ್ಮೀನಾರಾಯಣ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry