ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳು, ಇತರೆ ಸಿಬ್ಬಂದಿ ಒಳಗೊಂಡ 96 ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.

ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರ (ಉಡುಪಿಯ ಬೈಂದೂರು ಹೊರತುಪಡಿಸಿ) ಗಳಿಗೆ ತಲಾ ಒಂದೊಂದು ಮಾದರಿ ನೀತಿ ಸಂಹಿತೆ, ಸಹಾಯಕ ಖರ್ಚು–ವೆಚ್ಚಗಳ ವೀಕ್ಷಕರ, ಎಂಸಿಎಂಸಿ ಲೈಸನಿಂಗ್ ಅಧಿಕಾರಿ, ಅಕೌಂಟಿಂಗ್ ತಂಡ ರಚಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ ಎರಡು ವೀಡಿಯೊ ಕಣ್ಗಾವಲು ಮತ್ತು ಅವಲೋಕನ ತಂಡ ನೇಮಿಸಲಾಗಿದೆ ಎಂದು ಅವರು ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಲ್ಲದೇ, ಪ್ರತಿ ಕ್ಷೇತ್ರಕ್ಕೆ ಎರಡು ಸ್ಪಾಟಿಕ್ ಸರ್ವಯಲ್ ತಂಡ ಹಾಗೂ ಕ್ಷೇತ್ರದ ಗಾತ್ರ, ವಿಸ್ತೀರ್ಣಕ್ಕೆ ಅನುಗುಣವಾಗಿ ಒಟ್ಟಾರೆ 38 ಪ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ ಮಾಡಲಾಗಿದೆ. ಒಟ್ಟು ಏಳು ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 96 ತಂಡಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಪ್ರತಿ ತಂಡಕ್ಕೂ ಪ್ರತ್ಯೇಕ ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. ಈಗಾಗಲೇ ಈ ತಂಡಗಳು ತಮ್ಮ ಕಾರ್ಯನಿರ್ವಹಣೆ ಆರಂಭಿಸಿದೆ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಒಂದೇ ಸ್ಥಳದಲ್ಲಿ ಮೂರು ವರ್ಷಕ್ಕೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಣೆ ಮಾಡಿರುವ, ಅದೇ ಜಿಲ್ಲೆಗೆ ಸೇರಿದ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗುವ ಸರ್ಕಾರಿ ಸಿಬ್ಬಂದಿ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಹಾಗೆಯೇ, ಈ ಹಿಂದಿನ ಚುನಾವಣೆಗಳಲ್ಲಿ ಅಸಮರ್ಪಕ ಕಾರ್ಯ ವೈಖರಿಯಿಂದ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೊಬೈಲ್ ಆಫೀಸರ್ ನೇಮಕ: ಮತದಾನ ಕೇಂದ್ರಗಳಲ್ಲಿ ಮೂಲಸೌಕರ್ಯ ಕೊರತೆ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು, ಮತದಾನದ ಮುನ್ನಾ ದಿನ, ಮತದಾನದ ದಿನದಂದು ಚುನಾವಣಾ ಸಂಬಂಧಿತ ದಾಖಲಾತಿ ರವಾನೆಗೆ, ಚುನಾವಣಾ ಮುಕ್ತಾಯವಾದ ನಂತರ ಮತಗಟ್ಟೆ ಸಿಬ್ಬಂದಿ ಹಿಂದಿರುಗುವವರೆಗಿನ ಉಸ್ತುವಾರಿ ನೋಡಿಕೊಳ್ಳಲು ಸೆಕ್ಟರ್ ಮೊಬೈಲ್ ಆಫೀಸರ್ ನೇಮಕ ಮಾಡಲಾಗಿದೆ. 19ರಂದು ಜಿಲ್ಲೆಗೆ ಕೇಂದ್ರ ವೀಕ್ಷಕರ ತಂಡ ಬರಲಿದೆ ಎಂದು ತಿಳಿಸಿದರು.

ಏಕಗವಾಕ್ಷಿ: ಚುನಾವಣಾ ಪ್ರಚಾರಕ್ಕೆ ವಾಹನ ಬಳಕೆ, ಸಭೆ-ಸಮಾರಂಭ ಆಯೋಜನೆ, ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲು ಏಕಗವಾಕ್ಷಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಈ ಸಮಿತಿ ಕಾರ್ಯನಿರ್ವಹಣೆ ಮಾಡುತ್ತಿದೆ. ಸಭೆ ಸಮಾರಂಭ ನಡೆಯುವ 48 ಗಂಟೆ ಮುನ್ನ ರಾಜಕೀಯ ಪಕ್ಷಗಳು ಕೋರಿಕೆ ಸಲ್ಲಿಸಬೇಕು. ಕೋರಿಕೆ ಸ್ವೀಕರಿಸಿದ 24 ಗಂಟೆಯ ಒಳಗೆ ಕೋರಿಕೆ ಇತ್ಯರ್ಥ ಪಡಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕು ಕಚೇರಿಗಳಿಗೆ ಪ್ರತಿ ದಿನ ಸ್ವೀಕರಿಸಲಾದ ರಾಜಕೀಯ ಪಕ್ಷಗಳಿಗೆ ಸಂಬಂಧಿ ಸಿದ ಪ್ರಚಾರ ಸಭೆ - ಕಾರ್ಯಕ್ರಮ, ಪಾದಯಾತ್ರೆ, ವಾಹನ ಪರವಾನಗಿ, ದಾಖಲಾದ ದೂರುಗಳ ಕುರಿತಾದ ಸಮಗ್ರ ಅಂಕಿ–ಅಂಶದ ಮಾಹಿತಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮತ್ತಿತರರ ಪ್ರಕರಣಗಳ ಕುರಿತಂತೆ ದೂರು ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ: 08182–220255. ಇದುವರೆಗೂ ಕಂಟ್ರೋಲ್ ರೂಂಗೆ ಆರು ದೂರುಗಳು ಬಂದಿದ್ದು, ಐದನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜ್ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.