ಮಾಧವ ಗಾಡ್ಗೀಳ್ ವರದಿ: ಕೇರಳ ವಿಧಾನಸಭೆಯಲ್ಲಿ ಕಳವಳ

7

ಮಾಧವ ಗಾಡ್ಗೀಳ್ ವರದಿ: ಕೇರಳ ವಿಧಾನಸಭೆಯಲ್ಲಿ ಕಳವಳ

Published:
Updated:

ತಿರುವನಂತಪುರ (ಪಿಟಿಐ): ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಂಬಂಧ ಮಾಧವ ಗಾಡ್ಗೀಳ್ ಸಮಿತಿ ಮಾಡಿರುವ ಹಲವಾರು ಶಿಫಾರಸುಗಳ ಬಗ್ಗೆ ಕೇರಳ ವಿಧಾನ ಸಭೆಯಲ್ಲಿ ಶುಕ್ರವಾರ ತೀವ್ರವಾದ ಕಳವಳ ವ್ಯಕ್ತವಾಗಿದೆ.ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ರಾಜ್ಯಗಳ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.ಅಭಿವೃದ್ಧಿಗೆ ಸಹಾಯಕವಲ್ಲದ ಹಾಗೂ ಪ್ರಾಯೋಗಿಕವಾಗಿ ಜಾರಿ ಮಾಡಲಾಗದ ಶಿಫಾರಸುಗಳ ಬಗ್ಗೆ ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.ಸಮಿತಿಯ ಶಿಫಾರಸುಗಳನ್ನು ತಿದ್ದುಪಡಿ ಮಾಡದೇ ಜಾರಿಗೆ ತಂದರೆ ಅಲ್ಲಿರುವ ಕೃಷಿಕರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಅಲ್ಲಿರುವ ವಿದ್ಯುತ್ ಯೋಜನೆ ಗಳಿಗೂ ಸಹ ಅಡ್ಡಿ ಉಂಟಾಗುತ್ತದೆ ಎಂದು ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ವಿರೋಧ ಪಕ್ಷವಾದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸಹ ಆತಂಕ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry