ಗುರುವಾರ , ಮೇ 13, 2021
38 °C

ಮಾನವನ ದುರಾಸೆಗೆ ಪ್ರಕೃತಿ ನಾಶ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: `ಪ್ರಕೃತಿಯಿಂದ ನಮ್ಮ ಜೀವನೋಪಾಯಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದರೂ ಪರಿಸರವನ್ನು ವಿಕೃತಗೊಳಿಸಿ ಕಳಾಹೀನ ಬದುಕನ್ನು ನಡೆಸುತ್ತಿದ್ದೇವೆ~ ಎಂದು ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ವಿಷಾದಿಸಿದರು.



ಕೆಂಗೇರಿ ಉಪನಗರದ ಗಾಯಿತ್ರಿ ಮಂದಿರದಲ್ಲಿ ಬ್ರಾಹ್ಮಣ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.



`ಮನುಷ್ಯ  ದುರಾಸೆಯಿಂದ ಪರಿಸರ ಸಂಪತ್ತನ್ನು ಲೂಟಿ ಮಾಡಿ ಪ್ರಕೃತಿಗೆ ಧಕ್ಕೆ ಉಂಟು ಮಾಡುತ್ತಿದ್ದಾನೆ.  ಯಾರೋ ಮಾಡಿದ ತಪ್ಪಿಗೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು~ ಎಂದರು.



ಪ್ರೊ. ಆರ್.ಕೆ.ಪ್ರಹ್ಲಾದ್,ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎಸ್. ಸುಧೀಂದ್ರ ಕುಮಾರ್, ಕಾರ್ಯದರ್ಶಿ ಸುಧೀಂದ್ರ ರಾವ್, ಪ್ರೊ. ಶಂಕರ್ ನಾರಾಯಣ, ಕೆ.ಎಸ್.ನಾಗರಾಜ್, ಮೇಘನಾ ಇತರರು ಹಾಜರಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 60 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.