ಭಾನುವಾರ, ಏಪ್ರಿಲ್ 18, 2021
33 °C

ಮಾನೇಸರ್ ಘಟಕ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನೇಸರ್ (ಪಿಟಿಐ): ಕಾರ್ಮಿಕ ಗಲಭೆ ಹಿನ್ನೆಲೆಯಲ್ಲಿ ಕಳೆದ 34 ದಿನಗಳಿಂದ ಬೀಗಮುದ್ರೆಗೆ ಒಳಗಾಗಿದ್ದ ಮಾರುತಿ ಸುಜುಕಿ ಕಂಪೆನಿಯ ಮಾನೇಸರ್ ತಯಾರಿಕಾ ಘಟಕ ಮಂಗಳವಾರದಿಂದ ಪುನರಾರಂಭಗೊಂಡಿತು.

ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಸದ್ಯ ಒಂದೇ ಪಾಳಿಯಲ್ಲಿ ಕೇವಲ 300 ಜನ ಕಾಯಂ ನೌಕರರು ಮಾತ್ರ ಕೆಲಸ ಮಾಡುತ್ತಿದ್ದಾರೆ~ ಎಂದು ಕಂಪೆನಿ ವಕ್ತಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಬಿಗಿ ಭದ್ರತೆ: ಸುರಕ್ಷತೆಗಾಗಿ 1,500ಕ್ಕೂ ಹೆಚ್ಚು ಪೊಲೀಸರು ಮತ್ತು ಮೀಸಲು ತುಕಡಿಯ (ಐಆರ್‌ಬಿಐ) 500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಕಂಪೆನಿಯೇ 100 ಜನ ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ.ಗ್ರಾಮಸ್ಥರ ಸಂತಸ: ಮಾನೇಸರ್ ತಯಾರಿಕಾ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಘಟಕ ಪುನರಾರಂಭ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕಂಪೆನಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.