ಮಾಮೂಲು ಸ್ಥಿತಿಗೆ ಹೈಕೋರ್ಟ್

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮಾಮೂಲು ಸ್ಥಿತಿಗೆ ಹೈಕೋರ್ಟ್

Published:
Updated:

ನವದೆಹಲಿ: ಭಯೋತ್ಪಾದಕರ ದಾಳಿಗೆ ಗುರಿಯಾದ ಹೈಕೋರ್ಟ್ ಮಾಮೂಲು ಸ್ಥಿತಿಗೆ ಮರಳಿದ್ದು, ಗುರುವಾರ ಕಲಾಪ ನಡೆಯಿತು. ಪಾಸ್ ವಿತರಣಾ ಕೌಂಟರ್ ಅನ್ನು ಗೇಟ್ ಸಂಖ್ಯೆ 7ರ ಮುಂಭಾಗದ ಎನ್‌ಡಿಎಂಸಿ ಶಾಲಾ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಐದು ಕೌಂಟರ್‌ಗಳನ್ನು ತೆರೆಯಲಾಗಿದ್ದು, ಕಂಪ್ಯೂಟರ್ ಒಳಗೊಂಡು ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ. ಘಟನಾ ಸ್ಥಳ ಸೇರಿದಂತೆ ಕೋರ್ಟ್ ಸುತ್ತಮುತ್ತ ಭದ್ರತೆ ತೀವ್ರಗೊಳಿಸಲಾಗಿದೆ. ಕೋರ್ಟ್‌ಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಸಹಕರಿಸುವಂತೆ ವಕೀಲರಿಗೂ ಮನವಿ ಮಾಡಲಾಗಿದೆ.ಗೃಹ ಸಚಿವ ಪಿ.ಚಿದಂಬರಂ ಗುರುವಾರ ಹಿರಿಯ ಅಧಿಕಾರಿಗಳ ಜತೆ ಪರಿಸ್ಥಿತಿಯ ಅವಲೋಕನ ಮಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಎನ್‌ಎಐ ಮುಖ್ಯಸ್ಥ ದೆಹಲಿ ಪೊಲೀಸ್ ಕಮಿಷನರ್ ಅವರನ್ನು ಕಂಡು ಮಾಹಿತಿ ವಿನಿಮಯ ಮಾಡಿಕೊಂಡರು.ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ್ದ ಗೃಹ ಸಚಿವಾಲಯ ಕಾರ್ಯದರ್ಶಿ ಆರ್.ಕೆ. ಸಿಂಗ್, ವಿಧಿವಿಜ್ಞಾನ ಪ್ರಯೋಗಾಲಯದಿಂದ ಪ್ರಾಥಮಿಕ ವರದಿ ಬಂದಿದೆ. ಇನ್ನು ಕೆಲವು ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ಬುಧವಾರದ ಘಟನೆ ಕುರಿತು ತನಿಖೆ ನಡೆಸುತ್ತಿರುವ ಎನ್‌ಐಎಗೆ ಮೇ 25ರಂದು ಇದೇ ನ್ಯಾಯಾಲಯದ ಗೇಟ್ 7ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಸರ್ಕಾರ ಹಸ್ತಾಂತರ ಮಾಡಿದೆ. ತನಿಖೆಗೆ ಎನ್‌ಐಎ ದೆಹಲಿ, ಜಮ್ಮು- ಕಾಶ್ಮೀರ ಮತ್ತು ನೆರೆಹೊರೆ  ರಾಜ್ಯಗಳ ಪೊಲೀಸರ ನೆರವನ್ನು ಪಡೆದಿದೆ.

 

`ಹುಜಿ~ ಹೆಸರಿನಲ್ಲಿ ಬಂದಿರುವ ಇ-ಮೇಲ್ ಸಂಸತ್ ಮೇಲಿನ ದಾಳಿ ಸಂಬಂಧ ಮರಣ ದಂಡನೆಗೆ ಗುರಿಯಾಗಿರುವ ಅಫ್ಜಲ್ ಗುರುವಿನ ಶಿಕ್ಷೆ ರದ್ದುಪಡಿಸುವಂತೆ ಒತ್ತಡ ಹೇರಲು ಈ ಸ್ಫೋಟ ಎಸಗಲಾಗುತ್ತಿದೆ. ಶಿಕ್ಷೆ ರದ್ದು ಮಾಡದಿದ್ದರೆ ಇನ್ನಷ್ಟು ದಾಳಿ ನಡೆಸುವುದಾಗಿ ಎಚ್ಚರಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry