ಮಾರಿ ಕಣಿವೆ

7

ಮಾರಿ ಕಣಿವೆ

Published:
Updated:

ಸಮಸಂ ಕಲಾ ಸಮೂಹ: ಶುಕ್ರವಾರ ಜ್ಯೋತಿಪ್ರಕಾಶ್ ಮಿರ್ಜಿ ಅವರಿಂದ ಸಮೂಹ ಕಲಾ ಪ್ರದರ್ಶನ ಉದ್ಘಾಟನೆ, ಚಿತ್ರ ನಿರ್ದೇಶಕ ಗುರುಪ್ರಸಾದ್ ಅವರಿಂದ ಸಾಕ್ಷ್ಯಚಿತ್ರ ‘ಮಾರಿ ಕಣಿವೆ’ ಲೋಕಾರ್ಪಣೆ.  ಸಮಸಂ ಕಲಾ ಸಮೂಹ ಸಂಸ್ಥೆ, ಚಿತ್ರ ಕಲಾವಿದರು, ಶಿಲ್ಪಕಾರರು, ಸಂಗೀತ ನೃತ್ಯ ಕಲಾವಿದರು, ಛಾಯಾಚಿತ್ರಕಾರರು, ವಿಭಿನ್ನ ಕಲಾಭಿರುಚಿಯುಳ್ಳವರು... ಹೀಗೆ ಸೃಜನಶೀಲ ಯುವ ಮನಸ್ಸುಗಳ ಮಿತ್ರರ ಬಳಗ.ಭಾರತದ ಇತಿಹಾಸ, ಭವ್ಯ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲಾ ಪ್ರಕಾರ, ಕಲಾವಿದರನ್ನು ಮುಖ್ಯವಾಹಿನಿ ತರುವ ಉದ್ದೇಶ ಹೊಂದಿದೆ.ಪ್ರಸ್ತುತ ‘ಸಮಸಂ’ ಕಲಾವಿದರ ಸಮೂಹ ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದೆ. ಇದು ಮಾರ್ಚ್ 1ರವರೆಗೆ ನಡೆಯಲಿದೆ. ಪ್ರದರ್ಶನದ ಉದ್ಘಾಟನೆಯ ಸಂದರ್ಭದಲ್ಲಿ ‘ಮಾರಿ ಕಣಿವೆ’ ಇತಿಹಾಸ ಬಿಂಬಿಸುವ ಸಾಕ್ಷ್ಯಚಿತ್ರ ಲೋಕಾರ್ಪಣೆ ಮಾಡಲಾಗುತ್ತಿದೆ.

 ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ. ಸಂಜೆ 4.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry