ಮೈಸೂರು: ಮಾರ್ಚ್ ಅಂತ್ಯಕ್ಕೆ ಸೆಸ್ಕ್ ವ್ಯಾಪ್ತಿಯ ಒಂದು ಸಾವಿರ ಹಳ್ಳಿಗಳಿಗೆ 24 ಗಂಟೆ ವಿದ್ಯುತ್ ಪೂರೈಕೆಯಾಗಲಿದೆ!ರಾಜ್ಯ ಸರ್ಕಾರದ ಬಹು ನಿರೀಕ್ಷಿತ `ನಿರಂತರ ಜ್ಯೋತಿ~ ಯೋಜನೆಗೆ ಶ್ರೀಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ಅರಸೀಕೆರೆ, ನಂಜನಗೂಡು ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಈಗಾಗಲೇ ಚಾಲನೆ ಸಿಕ್ಕಿದೆ

. ಉಳಿದ ಗ್ರಾಮಗಳಿಗೂ ಇದನ್ನು ವಿಸ್ತರಿಸಲು ಮನೆ ಹಾಗೂ ಕೃಷಿ ಪಂಪ್ಸೆಟ್ಗಳಿಗೆ ಪ್ರತ್ಯೇಕ ಫೀಡರ್ ಅಳವಡಿ ಸುವ ಕಾರ್ಯ ಭರದಿಂದ ಸಾಗಿದೆ.

ಗುಜರಾತಿನ `ಜ್ಯೋತಿ ಗ್ರಾಮ ಯೋಜನೆ~ಯ ಮಾದರಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ರೈತರ ವಿರೋಧದ ನಡುವೆಯೇ ಕಾರ್ಯಾರಂಭಕ್ಕೆ ಸಿದ್ಧವಾಗುತ್ತಿದೆ. ಈಗಾಗಲೇ 23 ಫೀಡರ್ ಅಳವಡಿಸಲಾಗಿದ್ದು, ತಿಂಗಳ ಅಂತ್ಯಕ್ಕೆ ಇನ್ನೂ 25 ಫೀಡರ್ ಹಾಕುವ ಗುರಿ ಹೊಂದಲಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ `ನಿರಂತರ ಜ್ಯೋತಿ~ಯನ್ನು ಪೈಲಟ್ ಯೋಜನೆಯಾಗಿ ಅನುಷ್ಠಾನಗೊಳಿಸಿದ ಬಳಿಕ 25 ತಾಲ್ಲೂಕುಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ರೂ.208 ಕೋಟಿ ವೆಚ್ಚದ ಮೊದಲ ಹಂತದ ಕಾಮಗಾರಿಯನ್ನು 2011ರ ಜನವರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಚಾಮರಾಜನಗರ, ಕೊಳ್ಳೇಗಾಲ, ಮೈಸೂರಿನ ಹುಣಸೂರು, ಎಚ್.ಡಿ. ಕೋಟೆ, ತಿ.ನರಸೀಪುರ, ಹಾಸನದ ಹೊಳೆನರಸೀಪುರ, ಅರಸೀಕೆರೆ, ಮಂಡ್ಯದ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ತಾಲ್ಲೂಕಿನ 3,358 ಗ್ರಾಮಗಳಿಗೆ ಜೂನ್ ತಿಂಗಳೊಳಗೆ ನಿರಂತರ ವಿದ್ಯುತ್ ಸರಬರಾಜು ಆಗಲಿದೆ.

ನಗರ ಪ್ರದೇಶಗಳಂತೆಯೇ ಗ್ರಾಮಗಳಿಗೂ ಇಡೀ ದಿನ ವಿದ್ಯುತ್ ಸರಬರಾಜು ಮಾಡುವ ಸರ್ಕಾರ ಗುರಿ ಈ ಮೂಲಕ ಈಡೇರುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ಗೆ ಅಂತ್ಯ ಹಾಡಿ, ವಿದ್ಯಾರ್ಥಿ ಗಳ ಓದು, ಕುಡಿಯುವ ನೀರು ಸೇರಿ ದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶ ಹೊಂದಿದೆ. ಊರ ಹೊರಗಿನ ತೋಟದ ಮನೆಗಳಿಗೂ ನಿರಂತರ ವಿದ್ಯುತ್ ನೀಡುವ ಸಂಬಂಧ ಚಿಂತನೆ ನಡೆಸಲಾಗುತ್ತಿದೆ.

4 ತಾಲ್ಲೂಕುಗಳಿಗೆ ವಿನಾಯ್ತಿ:ನಿರಂತರ ವಿದ್ಯುತ್ ಯೋಜ ನೆಯಿಂದ ಮಲೆನಾಡು ಭಾಗದ ನಾಲ್ಕು ತಾಲ್ಲೂಕುಗಳನ್ನು ಕೈಬಿಡಲಾಗಿದೆ. ಕೊಡಗಿನ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ಹಾಗೂ ಹಾಸನದ ಸಕಲೇಶಪುರ ತಾಲ್ಲೂಕುಗಳಲ್ಲಿ ಪಂಪ್ಸೆಟ್ ಬಳಕೆ ತೀರಾ ಕಡಿಮೆ ಇದೆ.

ಹೀಗಾಗಿ ಅಲ್ಲಿ ಪ್ರತ್ಯೇಕ ವಿದ್ಯುತ್ ಲೈನ್ ಹಾಕುವ ಅಗತ್ಯವಿಲ್ಲ ಎಂಬ ಸತ್ಯವನ್ನು ಸೆಸ್ಕ್ ಕಂಡುಕೊಂಡಿದೆ. ಅಲ್ಲದೇ ಪ್ರತ್ಯೇಕ ಫೀಡರ್ ಅಳವಡಿಕೆಯಿಂದ ಅರಣ್ಯ ಕೂಡ ನಾಶವಾಗುತ್ತದೆ. ಇದರಿಂದ ಈ ತಾಲ್ಲೂಕುಗಳಿಗೆ ದಿನವಿಡಿ ವಿದ್ಯುತ್ ನೀಡಲು ನಿರ್ಧರಿಸಲಾಗಿದೆ.

2ನೇ ಹಂತ ಜೂನ್ನಿಂದ ಆರಂಭ: `ಉಳಿದ 15 ತಾಲ್ಲೂಕಿನಲ್ಲಿ ಎರಡನೇ ಹಂತದ ಕಾಮಗಾರಿ ಬರುವ ಜೂನ್ನಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ರೂ.250 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದು, 3,500 ಹಳ್ಳಿಗಳಿಗೆ ಸುಮಾರು 180 ಫೀಡರ್ ಅಳವಡಿಕೆ ಮಾಡಲಾಗುವುದು~ ಎಂದು ಸೆಸ್ಕ್ನ ಮುಖ್ಯ ಎಂಜಿನಿಯರ್ ಸತ್ಯನಾರಾಯಣ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.